30 ದಿನದಲ್ಲಿ ಜಾರಿಯಾಗುತ್ತಾ ನೂತನ ಕಾನೂನು!?: ಏನಿದು ಯುಸಿಸಿ..? ನೀವೂ ಹೇಳಬಹುದಾ ನಿರ್ಧಾರ..?

Jun 16, 2023, 11:10 AM IST

ಮೋದಿ ಸರ್ಕಾರ,ಈ ತನಕ ಕೊಟ್ಟಿರೋ ಭರವಸೆಗಳನ್ನೆಲ್ಲಾ ಈಡೇರಿಸಿದೆ. ಒಂದೆಡೆ ದೇಶದ ಆರ್ಥಿಕತೆ ಸುಭದ್ರವಾಗಿರೋ ಹಾಗೆ, ಬೊಕ್ಕಸವನ್ನು ಕಾಪಾಡಿದ ಸರ್ಕಾರ ಇನ್ನೊಂದೆಡೆ ಕೊಟ್ಟ ವಾಗ್ದಾನಗಳನ್ನೆಲ್ಲಾ ಪೂರೈಸ್ತಾ ಬಂದಿದೆ.ಈಗಾಗ್ಲೇ ರಾಮಮಂದಿರ ಆಲ್ ಮೋಸ್ಟ್ ಕಂಪ್ಲೀಟ್ ಹಂತಕ್ಕೆ ಬಂದಿದೆ. ಅಂದುಕೊಂಡ ಟೈಮಿಗೆ ಕರೆಕ್ಟಾಗಿ, ರಾಮರ ಪಟ್ಟಾಭಿಷೇಕವೂ ಆಗೋದಿದೆ. ಅದೂ ಕೂಡ ಮೋದಿ ಅವರ ನೇತೃತ್ವದಲ್ಲೇ ಆಗಲಿದೆ ಅನ್ನೋದ್ರಲ್ಲಿ ನೋ ಡೌಟ್.ಅಲ್ಲದೇ ಆರ್ಟಿಕಲ್‌ 370ಯನ್ನೂ ರದ್ದು ಮಾಡಿತ್ತು. ಇದೀಗ ಏಕರೂಪ ನಾಗರಿಕ ಸಂಹಿತೆ, ಅರ್ಥಾತ್ ಯೂನಿಫಾರ್ಮ್ ಸಿವಿಲ್ ಕೋಡ್ ಜಾರಿ ಮಾಡಲು ಮುಂದಾಗಿದೆ.ಧರ್ಮಾಧರಿತವಾಗಿ ಕಾನೂನು ಇರೋ ಬದಲಾಗಿ, ಎಲ್ಲಾ ಭಾರತೀಯರಿಗೂ ಒಂದೇ ಕಾನೂನು ಮಾಡೋದನ್ನಂತೂ ಬಿಡಲ್ಲ ಅಂತ ಅಮಿತ್ ಶಾ ಅವರು ಹೇಳಿದ್ರು. ಆದ್ರೆ ಈಗ ಆ ಕಾಲ ಕೂಡಿಬಂದ ಹಾಗೆ ಕಾಣ್ತಾ ಇದೆ. ಹಾಗಾಗಿನೇ, ಯುಸಿಸಿ ವಿಚಾರದಲ್ಲಿ ಅತಿದೊಡ್ಡ ತೀರ್ಮಾನ ಕೈಗೆತ್ತಿಕೊಂಡಿದೆ ಕೇಂದ್ರ ಬಿಜೆಪಿ ಸರ್ಕಾರ.

ಇದನ್ನೂ ವೀಕ್ಷಿಸಿ: ಅನ್ನಭಾಗ್ಯಕ್ಕೆ ಅಕ್ಕಿ ಶಾಕ್, ಶುರು ರಾಜಕೀಯ: ತಾರತಮ್ಯ ಮಾಡ್ತಿದ್ಯಾ ಕೇಂದ್ರ ಸರ್ಕಾರ!?