ಅನ್ನಭಾಗ್ಯಕ್ಕೆ ಅಕ್ಕಿ ಶಾಕ್, ಶುರು ರಾಜಕೀಯ: ತಾರತಮ್ಯ ಮಾಡ್ತಿದ್ಯಾ ಕೇಂದ್ರ ಸರ್ಕಾರ!?

ಅನ್ನಭಾಗ್ಯಕ್ಕೆ ಆರಂಭಿಕ ವಿಘ್ನ.. ಅಕ್ಕಿ ಕಾಳಗ ಬಲು ಜೋರು!
ಸಿಎಂ"ರಾಮಯ್ಯ ಬತ್ತಳಿಕೆಯಲ್ಲಿ ರೆಡಿಯಾಗಿದೆ ಕೌಂಟರ್ ಪ್ಲಾನ್!
ಅನ್ನಭಾಗ್ಯಕ್ಕೆ ಜು. 1ರ ಮುಹೂರ್ತವಿಟ್ಟಿದ್ದಾರೆ "ಅನ್ನ"ರಾಮಯ್ಯ!

First Published Jun 16, 2023, 10:54 AM IST | Last Updated Jun 16, 2023, 10:54 AM IST

ಇದು ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಶುರುವಾಗಿರೋ ಹೊಚ್ಚ ಹೊಸ  ಕಾಳಗ. ಅನ್ನರಾಮಯ್ಯನ ಅನ್ನಭಾಗ್ಯ ಸ್ಕೀಮ್‌ಗೆ ಎದುರಾಗಿದೆ ಸ್ಟಾರ್ಟಿಂಗ್ ಟ್ರಬಲ್. ಇದು ಮೋದಿ ಸರ್ಕಾರದ ಷಡ್ಯಂತ್ರ ಅಂತಿದ್ದಾರೆ ಸಿಎಂ ಸಿದ್ದರಾಮಯ್ಯ. ಇಲ್ಲ ಇಲ್ಲ, ಇದ್ರಲ್ಲಿ ಕೇಂದ್ರದ ಪಾತ್ರ ಏನೂ ಇಲ್ಲ,ಇದೆನ್ನೆಲ್ಲಾ ನಿಭಾಯಿಸಬೇಕಾಗಿರೋರು ನೀವೇ ಅಂತಿದ್ದಾರೆ ಬಿಜೆಪಿ ನಾಯಕರು.ಅಷ್ಟಕ್ಕೂ ಏನೀ ರಾಜಕೀಯ ಕೆಸರೆರಚಾಟದ ಗುಟ್ಟು? ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿದು ನಿಂತದ್ದೇಕೆ? ಎಂಬ ಮಾಹಿತಿ ಇಲ್ಲಿದೆ..ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ಕೊಡೋದಕ್ಕೆ ಸಾಧ್ಯವಿಲ್ಲ ಅಂತ ಭಾರತೀಯ ಆಹಾರ ನಿಗಮ ರಾಜ್ಯ ಸರ್ಕಾರಕ್ಕೆ ಹೇಳಿ ಬಿಟ್ಟಿದೆ. ಹಾಗಾದ್ರೆ 2 ಲಕ್ಷದ 28 ಸಾವಿರ ಮೆಟ್ರಿಕ್ ಟನ್ ಅಕ್ಕಿಯನ್ನು ಅನ್ನರಾಮಯ್ಯ ಎಲ್ಲಿಂದ ತರ್ತಾರೆ..? ಅನ್ನಭಾಗ್ಯದ ಅಕ್ಕಿಗಾಗಿ ಸರ್ಕಾರದ ಮುಂದಿರೋ ಪ್ಲಾನ್ ಏನು ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ವೀಕ್ಷಿಸಿ: ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆ ರದ್ದು: ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

Video Top Stories