Oct 9, 2024, 12:36 PM IST
ಬೆಂಗಳೂರು(ಅ.09): ಹರ್ಯಾಣ ಗೆದ್ದ ಬಿಜೆಪಿ, ದೋಸ್ತಿ ಜೊತೆ ಸೇರಿ ಕಾಶ್ಮೀರ ಗೆದ್ದ ಕಾಂಗ್ರೆಸ್. 370ರ ಮಹಾಕ್ರಾಂತಿಯ ಮಧ್ಯೆಯೂ ಕಾಶ್ಮೀರ ಕುರುಕ್ಷೇತ್ರದಲ್ಲಿ ಬಿಜೆಪಿ ಮುಗ್ಗರಿಸಿದ್ದೇಕೆ..? ಗೆದ್ದು ಸೋತ ಕೇಸರಿ ಪಡೆ, ಏನಿದು ಸೀಕ್ರೆಟ್..? ಜಮ್ಮು ಗೆದ್ದ ಕೇಸರಿ ಪಾಳೆಯಕ್ಕೆ ಕಾಶ್ಮೀರ ಕಬ್ಬಿಣದ ಕಡೆಲೆಯಾಗಿದ್ದು ಯಾಕೆ..? ಬಿಜೆಪಿ ಕೈ ಹಿಡಿಯಲಿಲ್ವಾ ಆರ್ಟಿಕಲ್ 370 ಕ್ರಾಂತಿ..? ಬಿಜೆಪಿ ಸಮರವ್ಯೂಹವನ್ನು ಭೇದಿಸಿ ಜಯಭೇರಿ ಕಾಶ್ಮೀರ ಕಿರೀಟ ಮುಡಿಗೇರಿಸಿಕೊಂಡದ್ದು ಹೇಗೆ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನಸ್ ದೋಸ್ತಿ..? ಇದೇ ಇವತ್ತಿನ ಸುವರ್ಣ ಸ್ಪೆಷಲ್, ಕಾಶ್ಮೀರ ಕದನ ರಹಸ್ಯ.
ಜಮ್ಮು ಗೆದ್ದ ಬಿಜೆಪಿಗೆ ಕಾಶ್ಮೀರವನ್ನು ಗೆಲ್ಲೋಕೆ ಸಾಧ್ಯವಾಗಿಲ್ಲ. ಜಮ್ಮುವಿನಲ್ಲಿ ಮುಗ್ಗರಿಸಿದ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟ ಕಾಶ್ಮೀರವನ್ನು ಕೈವಶ ಮಾಡ್ಕೊಂಡು, ಕಣಿವೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ.
ಜಮ್ಮು-ಕಾಶ್ಮೀರ ಚುನಾವಣೆಯಲ್ಲಿ ಜಮ್ಮು ಗೆದ್ದ ಬಿಜೆಪಿಗೆ ಕಾಶ್ಮೀರವನ್ನು ಗೆಲ್ಲೋಕೆ ಸಾಧ್ಯವಾಗಿಲ್ಲ. ಜಮ್ಮುವಿನಲ್ಲಿ ಮುಗ್ಗರಿಸಿದ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟ ಕಾಶ್ಮೀರವನ್ನು ಕೈವಶ ಮಾಡ್ಕೊಂಡು, ಕಣಿವೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ. ಅಷ್ಟಕ್ಕೂ ಕಣಿವೆ ರಾಜ್ಯದಲ್ಲಿ ದೋಸ್ತಿ ಗೆಲುವಿನ ರೂವಾರಿ ಯಾರು ಗೊತ್ತಾ..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.
ಹರಿಯಾಣದಲ್ಲಿ ಬಿಜೆಪಿ ಮ್ಯಾಜಿಕ್, ಜಮ್ಮು ಕಾಶ್ಮೀರದಲ್ಲಿ ಅಬ್ದುಲ್ಲಾಗಳಿಗೆ ಅಧಿಕಾರ
ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಗೆದ್ದದ್ದು ಕೇವಲ 6 ಸ್ಥಾನಗಳನ್ನು.. ಆರಕ್ಕೇ ಜಾಕ್ ಪಾಟ್.. ಹಾಗಾದ್ರೆ ದೋಸ್ತಿ ಪಡೆ ಕಾಶ್ಮೀರದ ಕದನ ಗೆಲ್ಲುವಲ್ಲಿ ಕಾಂಗ್ರೆಸ್ ಪಾತ್ರ ಎಷ್ಟು..?
ಜಮ್ಮು-ಕಾಶ್ಮೀರದ ಒಟ್ಟು 90 ವಿಧಾನಸಭಾ ಕ್ಷೇತ್ರಗಳಲ್ಲಿ 56 ಕಡೆ ಸ್ಪರ್ಧಿಸಿದ್ದ ನ್ಯಾಷನಲ್ ಕಾನ್ಫರೆನ್ಸ್ 42 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಗೆದ್ದಿರೋದು ಕೇವಲ 6 ಸ್ಥಾನಗಳನ್ನು. ಕೈ ಪಡೆಗೆ ಆರಕ್ಕೇ ಜಾಕ್ ಪಾಟ್.. ತುಂಬಾ ವರ್ಷಗಳ ನಂತ್ರ ಕಣಿವೆ ರಾಜ್ಯದಲ್ಲಿ ಅಧಿಕಾರ ಭಾಗ್ಯ.