Jun 18, 2024, 9:32 AM IST
ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ, ಇದೀಗ ಬೈ ಎಲೆಕ್ಷನ್(By-election) ಬ್ಯಾಟಲ್ ಜೋರಾಗಿದೆ. ಚನ್ನಪಟ್ಟಣ ಉಪಸಮರಕ್ಕೆ ಬಿಜೆಪಿ(BJP)-ಜೆಡಿಎಸ್(JDS) ತಯಾರಿ ನಡೆಸುತ್ತಿವೆ. ಎಲೆಕ್ಷನ್ ಡೇಟ್ ಘೋಷನೆಗೂ ಮುನ್ನವೇ ಟಿಕೆಟ್(Ticket) ಲೆಕ್ಕಾಚಾರ ಶುರುವಾಗಿದೆ. ಚನ್ನಪಟ್ಟಣ(Channapatna) ಕ್ಷೇತ್ರ ಬಿಜೆಪಿಗೋ..? ಅಥವಾ ಜೆಡಿಎಸ್ಗೋ..? ಎಂಬ ಮಾತುಗಳು ಕೇಳಿಬರುತ್ತಿವೆ. ಕ್ಷೇತ್ರ ಉಳಿಸಿಕೊಳ್ಳಲು ಕುಮಾರಸ್ವಾಮಿ ರಣತಂತ್ರ ಹೂಡಿದ್ರೆ, ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಸಲು ಎಚ್‌ಡಿಕೆ ಪ್ಲಾನ್ ಮಾಡುತ್ತಿದ್ದಾರೆ. ಇತ್ತ ‘ನಾನೇ ಮೈತ್ರಿ ಅಭ್ಯರ್ಥಿ’ ಎಂದು ಸಿಪಿ ಯೋಗೇಶ್ವರ್ ಹೇಳುತ್ತಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಿ.ಪಿ ಯೋಗೇಶ್ವರ್ ಶತಪ್ರಯತ್ನ ನಡೆಸುತ್ತಿದ್ದು, ಸಿ.ಪಿ ಯೋಗೇಶ್ವರ್, ನಿಖಿಲ್.. ಯಾರಿಗೆ ಚನ್ನಪಟ್ಟಣ ಟಿಕೆಟ್ ನೀಡಲಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ವೀಕ್ಷಿಸಿ: ವೈದ್ಯರಿಲ್ಲ, ಸಿಬ್ಬಂದಿಯಿಲ್ಲ ಆಪರೇಷನ್ ಮಾಡೋಕೆ ನೀರೂ ಇಲ್ಲ: ಅವ್ಯವಸ್ಥೆಗಳ ಕೂಪವಾಯ್ತಾ ಜಯದೇವ ಹೃದ್ರೋಗ ಆಸ್ಪತ್ರೆ ?