Jul 4, 2022, 8:52 PM IST
ರಾಮನಗರ (ಜು. 04): 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ (Assembly Election 2023) ರಾಜಕೀಯ ಅಖಾಡ ಸಿದ್ದವಾಗುತ್ತಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ನ 'ಕರ್ನಾಟಕ ಕುರುಕ್ಷೇತ್ರ' (Karnataka Kurukshetra)ಕಾರ್ಯಕ್ರಮ ಚುನಾವಣಾ ಚದುರಂಗದಾಟದ ಚಿತ್ರಣದ ಸರಣಿ ವರದಿಗಳು, 31 ಜಿಲ್ಲೆ 224 ಕ್ಷೇತ್ರಗಳ ರಾಜಕೀಯ ಚಟುವಟಿಕೆಗಳ ಕಂಪ್ಲೀಟ್ ಚಿತ್ರಣ ನೀಡಲಿದೆ.
ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ, ಕದನ ಕಲಿಗಳ ಕಸರತ್ತು ಭರ್ಜರಿಯಾಗಿ ಆರಂಭವಾಗಿದೆ. ಈ ಕಸರತ್ತುಗಳ ಸಂಪೂರ್ಣ ವಿವರವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ (Asianet Suvarna News) ಪ್ರತಿದಿನವೂ ನಿಮ್ಮೆದುರು ಇಡಲಿದೆ. ಎಲ್ಲಾ ಕ್ಷೇತ್ರದ ಸಮಗ್ರ ಚಿತ್ರಣ, ವಿಶ್ಲೇಷಣೆಯನ್ನು ಕಟ್ಟಿಕೊಡಲಿದೆ.
'ಕರ್ನಾಟಕ ಕುರುಕ್ಷೇತ್ರ'ದಲ್ಲಿ ಸಂಭಾವ್ಯ ಅಭ್ಯರ್ಥಿಗಳು ಯಾರು? ಜನರ ಒಲವು ಯಾರ ಕಡೆ? ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರ, ಚುನಾವಾಣೆಗಾಗಿ ರಾಜಕೀಯ ಪಕ್ಷಗಳು ಮಾಡಿಕೊಂಡಿರುವ ತಯಾರಿ, ಜಿಲ್ಲಾವಾರು ಬಲಾಬಲದ ಮಾಹಿತಿ ಜತಗೆ ಅತ್ಯಂತ ನಿಖರ ವಿವರಗಳು, ತಜ್ಞರಿಂದ ನಿಷ್ಪಕ್ಷಪಾತ ರಾಜಕೀಯ ವಿಶ್ಲೇಷಣೆ ಇರಲಿದೆ. 'ಕರ್ನಾಟಕ ಕುರುಕ್ಷೇತ್ರ'ದ ಮೊದಲ ಜಿಲ್ಲೆಯಾಗಿ ಇಬ್ಬರು ಸಿಎಂ ಆಕಾಂಕ್ಷಿಗಳಿರುವ ರೇಷ್ಮೆ ನಗರಿ ರಾಮನಗರದ (Ramanagara) ಎಲೆಕ್ಷನ್ ಗ್ರೌಂಡ್ ರಿಪೋರ್ಟ್ ಇಲ್ಲಿದೆ
ಇದನ್ನೂ ನೋಡಿ: 'ಸಿದ್ದರಾಮೋತ್ಸವ' ಮಧ್ಯೆ ಪಕ್ಷ ನಿಷ್ಠೆ ಬಗ್ಗೆ ಡಿಕೆಶಿ ಪಾಠ: ಕನಕಪುರ ಬಂಡೆ ಗುಡುಗಿದ್ದು ಯಾರ ಮೇಲೆ?