ಮಾಜಿ ಚಾಂಪಿಯನ್’ಗೆ ಶಾಕ್ ಕೊಟ್ಟ ಭಾರತದ 13 ವರ್ಷದ ಸಾಧ್ವಾನಿ

Oct 22, 2019, 6:17 PM IST

ಬೆಂಗಳೂರು[ಅ.22]: ರೌನಕ್ ಸಾಧ್ವಾನಿ 40 ವರ್ಷದ ರಷ್ಯಾದ ಅಲೆಕ್ಸಾಂಡರ್ ಮೊಟ್ಯಾಲವ್ ಅವರಿಗೆ ಆಘಾತಕಾರಿ ಸೋಲುಣಿಸಿದ್ದಾರೆ. ರೌನಕ್’ಗೆ ಈಗ 13 ವರ್ಷ 9 ತಿಂಗಳು ಹಾಗೂ 28 ದಿನಗಳಾಗಿವೆ.

ಹರಿಣಗಳ ಶಿಕಾರಿ: ಟೀಂ ಇಂಡಿಯಾಗೆ ಜೈ ಹೋ ಎಂದ ಟ್ವಿಟರಿಗರು

ನಾಗ್ಪುರ ಮೂಲದ ರೌನಕ್ ಇಂಟರ್ ನ್ಯಾಷನಲ್ ಮಾಸ್ಟರ್ ಆಗಿದ್ದು, 2019ರ ಏರೋಫ್ಲೋಟ್ ಓಪನ್’ನಲ್ಲಿ ಮೊದಲ ಗ್ರ್ಯಾಂಡ್ ಮಾಸ್ಟರ್ ಅರ್ಹತೆಗಿಟ್ಟಿಸಿಕೊಂಡಿದ್ದರು. ಇನ್ನು 2019ರ ಫೋರ್ಟಿಸಿಕೊ ಓಪನ್’ನಲ್ಲಿ ಎರಡನೇ ಎರಡನೇ ಗ್ರ್ಯಾಂಡ್’ಸ್ಲಾಂ ಪರೀಕ್ಷೆಯಲ್ಲೂ ಯಶಸ್ವಿಯಾಗಿದ್ದರು.