ವಿಶ್ವದಾಖಲೆಯೊಂದಿಗೆ ಟೋಕಿಯೋ ಟಿಕೆಟ್ ಪಕ್ಕಾ ಮಾಡಿಕೊಂಡ ಪ್ಯಾರಾಂಪಿಯನ್‌ ದೇವೇಂದ್ರ ಝಜಾರಿಯಾ

Jul 1, 2021, 9:36 AM IST

ನವದೆಹಲಿ(ನವದೆಹಲಿ): ಪ್ಯಾರಾಲಿಂಪಿಕ್ಸ್‌ ಜಾವಲಿನ್ ಪಟು ದೇವೇಂದ್ರ ಝಜಾರಿಯಾ ತಮ್ಮದೇ ಹೆಸರಿನಲ್ಲಿದ್ದ(63.97 ಮೀಟರ್) ದಾಖಲೆಯನ್ನು ಮುರಿದು ಬರೋಬ್ಬರಿ 65.71 ಮೀಟರ್ ದೂರ ಜಾವಲಿನ್ ಎಸೆಯುವ ಮೂಲಕ ವಿಶ್ವದಾಖಲೆಯೊಂದಿಗೆ ಟೋಕಿಯೋ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ನವದೆಹಲಿಯ ಜವಹರ್‌ಲಾಲ್‌ ನೆಹರೂ ಸ್ಟೇಡಿಯಂನಲ್ಲಿ ನಡೆದ ಆಯ್ಕೆ ಟ್ರಯಲ್ಸ್‌ ವೇಳೆ ಝಜಾರಿಯಾ ಈ ಸಾಧನೆ ಮಾಡಿದ್ದಾರೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಎರಡು ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎನಿಸಿರುವ ಝಜಾರಿಯಾ ಇದೀಗ ಮತ್ತೊಂದು ಪದಕದ ಮೇಲೆ ಕಣ್ಣಿಟ್ಟಿದ್ದಾರೆ. 

ತಮ್ಮದೇ ದಾಖಲೆ ಮುರಿದು ಟೋಕಿಯೋಗೆ ಹೊರಟ ದೇವೇಂದ್ರ, ಗುಡ್ ಲಕ್!

ತಮ್ಮ 40ನೇ ವಯಸ್ಸಿನಲ್ಲೂ ಪದಕದ ಹಸಿವು ಹೊಂದಿರುವ ದೇವೇಂದ್ರ, ಇದೆಲ್ಲವೂ ಆಸಕ್ತಿ, ಮಾನಸಿಕವಾಗಿ ಸದೃಢವಾಗಿರುವುದು, ಒಳ್ಳೆಯ ತರಬೇತಿಯಿಂದಾಗಿ ಸಾಧಣೆ ಮಾಡಬಹುದು. ವಯಸ್ಸು ಕೇವಲ ನಂಬರ್‌ಗಳಷ್ಟೇ ಎಂದು ರಾಜಸ್ಥಾನ ಮೂಲದ ಅಥ್ಲೀಟ್‌ ಹೇಳಿದ್ದಾರೆ