ಬಲಾಢ್ಯ ಸೈನಿಕರ ಪಡೆ ನಿರ್ಮಾಣಕ್ಕೆ ಚೀನಾ ತಂತ್ರ: ಸೂಪರ್ ಸೋಲ್ಜರ್ ಬಗ್ಗೆ ನಿಮಗೆಷ್ಟು ಗೊತ್ತು?

Feb 15, 2023, 4:31 PM IST

ಒಬ್ಬ ಸೈನಿಕ ಗಡಿಯಲ್ಲಿ 1-2 ದಿನ ಮಾತ್ರ ಕೆಲಸ ಮಾಡಬಲ್ಲ, ಆದ್ರೆ ಈ ಸೂಪರ್ ಸೋಲ್ಜರ್ ಮಾತ್ರ ಒಂದು ಹನಿ ನೀರು ಇಲ್ಲದೇ ಯುದ್ಧಭೂಮಿಯಲ್ಲಿ ಕೆಲಸ ಮಾಡಬಹುದು. ಸಾಮಾನ್ಯ ಸೈನಿಕ ಊಟ, ನೀರು ಹಾಗೂ ನಿದ್ರೆ ಇಲ್ಲದೇ ಅನಾರೋಗ್ಯಕ್ಕೆ ತುತ್ತಾಗಬಹುದು. ಆದ್ರೆ ಸೂಪರ್ ಸೋಲ್ಜರ್ ಮಾತ್ರ ಏನು ಇಲ್ಲದಿದ್ದರೆ ಎಷ್ಟೋ ದಿನಗಳವರೆಗೆ ಇದ್ದು ಶತ್ರುಗಳ ವಿರುದ್ಧ ಹೋರಾಡಬಹುದು. 2020ರಿಂದಲೇ ಚೀನಾವು ಕ್ರಿಸ್ಪರ್‌ ತಂತ್ರಜ್ಞಾನದ ಸಹಾಯದಿಂದ ಸೂಪರ್‌ ಸೈನಿಕರನ್ನು ತಯಾರಿಸುವ ಯೋಜನೆ ಪ್ರಾರಂಭಿಸಿದೆ. ಇದಕ್ಕಾಗಿ ಆಯ್ದ ಆರೋಗ್ಯವಂತ ಯೋಧರ ಡಿಎನ್‌ಎಗಳನ್ನೂ ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿದೆ. ಇದರಿಂದ ಹೊಸ ಬಲಾಢ್ಯ ಸೈನಿಕರ ಪಡೆಯನ್ನು ನಿರ್ಮಾಣ ಮಾಡುವ ಯೋಜನೆಗೆ ಚೀನಾ ಚಾಲನೆ ನೀಡಿದೆ ಎಂದು ಸಿಐಎ ವರದಿಯಲ್ಲಿ ಉಲ್ಲೇಖಿಸಲಾಗಿದೆ.