BIG3: ಲಕ್ಷಾಂತರ ರೂ. ವಿದ್ಯುತ್ ತೆರಿಗೆ ಬಾಕಿ: ಸುಂಟಿಕೊಪ್ಪ ಗ್ರಾಪಂ ಎಡವಟ್ಟು
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಗ್ರಾಮ ಪಂಚಾಯತಿಯು, ಕೆಇಬಿಗೆ ಕಟ್ಟಬೇಕಾಗಿರುವ ಲಕ್ಷಾಂತರ ರೂಪಾಯಿ ವಿದ್ಯುತ್ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ
ಗ್ರಾಮಗಳ ಅಭಿವೃದ್ಧಿಗಾಗಿ ಗ್ರಾಮ ಪಂಚಾಯತಿಯು, ವಿವಿಧ ತೆರಿಗೆಗಳನ್ನು ಸಂಗ್ರಹಿಸುತ್ತದೆ. ಆದರೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾತ್ರ ಸಂಗ್ರಹಿಸಬೇಕಿದ್ದ ಬಾಕಿ ಲಕ್ಷಾಂತರ ರೂಪಾಯಿ ತೆರಿಗೆಯನ್ನು ಸಂಗ್ರಹಿಸದೆ ತಾನೂ ಕೂಡ ಕೆಇಬಿಗೆ ಕಟ್ಟಬೇಕಾಗಿರುವ ಲಕ್ಷಾಂತರ ರೂಪಾಯಿ ವಿದ್ಯುತ್ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಪಂಚಾಯಿತಿ ಕಚೇರಿಗೆ ವಿದ್ಯುತ್ ಸಂಪರ್ಕವಿಲ್ಲದೆ ಜನರೇಟರ್ ಬಳಸಿ ಪಂಚಾಯತಿ ಕೆಲಸ ನಿಭಾಯಿಸುತ್ತಿದೆ. ಇನ್ನು ಪಂಚಾಯತಿ ಬರೋಬ್ಬರಿ 30 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಕುರಿತು ಪ್ರಶ್ನಿಸಿದರೆ ಅದು ಹಿಂದಿನ ಆಡಳಿತ ಮಂಡಳಿಯಿಂದಲೇ 35 ಲಕ್ಷ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಳ್ಳಲಾಗಿತ್ತು. ನಮ್ಮ ಆಡಳಿತ ಮಂಡಳಿ ಬಂದ ಮೇಲೆ ಅದನ್ನು ತೀರಿಸಲಾಗಿದೆ. ಆದರೆ ಪ್ರತಿ ವರ್ಷ 30 ಲಕ್ಷ ವಿದ್ಯುತ್ ಬಿಲ್ ಬರುತ್ತಿದ್ದು, ಅನುದಾನವಿಲ್ಲದೆ ಇರುವುದರಿಂದ ಮತ್ತೆ ಬಾಕಿ ಇದೆ. ಅಂಗಡಿ ಮಳಿಗೆಗಳ ಟೆಂಡರ್ ಪ್ರಕ್ರಿಯೆ ಬಳಿಕ ಬಂದ ಆದಾಯದಿಂದ ವಿದ್ಯುತ್ ಬಿಲ್ ಕಟ್ಟಲಾಗುವುದು ಎಂದು ಪಂಚಾಯಿತಿ ಅಧ್ಯಕ್ಷೆ ಹೇಳುತ್ತಿದ್ದಾರೆ. 47 ಲಕ್ಷ ವೆಚ್ಚದಲ್ಲಿ ಪಂಚಾಯತಿಯ ನೂತನ ಕಟ್ಟಡ ನಿರ್ಮಿಸಿದ್ದರೂ ವಿದ್ಯುತ್ ಬಿಲ್ ಬಾಕಿ ಇರುವುದರಿಂದ ನೂತನ ಕಟ್ಟಡಕ್ಕೂ ವಿದ್ಯುತ್ ಸಂಪರ್ಕವಿಲ್ಲದೆ ಕಟ್ಟಡ ಕಾಮಗಾರಿ ಮುಗಿದಿದ್ದರೂ ನೂತನ ಕಟ್ಟಡಕ್ಕೆ ಕಾರ್ಯಾಲಯ ಮಾತ್ರ ಸ್ಥಳಾಂತರಗೊಂಡಿಲ್ಲ. ಹೀಗಾಗಿ ಗ್ರಾಮಸ್ಥರೆಲ್ಲಾ ಆಕ್ರೋಶ ಹೊರ ಹಾಕುತ್ತಿದ್ದಾರೆ.
BIG3: ತುಮಕೂರು ಜಿಲ್ಲೆಯಲ್ಲಿ ರೈತರ ಜೊತೆ ಬೆಸ್ಕಾಂ ಚೆಲ್ಲಾಟ: ಟಿಸಿ ವಿಲೇವಾರಿಗೆ ನಿರ್ಲಕ್ಷ್ಯ