May 15, 2020, 2:50 PM IST
ಬೆಂಗಳೂರು(ಮೇ.15): ಬಿಡಿಎ ಅಕ್ರಮ ಸಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ(ಗುರುವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವ ಜೆ.ಮಾಧುಸ್ವಾಮಿ ಹಾಗೂ ವಿ.ಸೋಮಣ್ಣ ಅವರ ಮಧ್ಯ ವಾಕ್ಸಮರ ನಡೆದಿತ್ತು. ಆದರೆ, ಇಂದೂ ಕೂಡ ಇವರಿಬ್ಬರ ಮಧ್ಯೆದ ಟಾಕ್ ಫೈಟ್ ಮುಂದುವರೆದಿದೆ. 12 ವರ್ಷಗಳ ದಾಖಲೆ ನೀಡುವ ಸಂಬಂಧ ಮಾತಿಗೆ ಮಾತು ಬೆಳೆದಿದೆ.
ಇಡೀ ಜಗತ್ತಿಗೆ ಕೊರೋನಾ ಚಿಂತೆಯಾದ್ರೆ, ಇವರಿಗೆ ಟಿಕ್‌ಟಾಕ್ ವಿಡಿಯೋ ಮಾಡೋ ಚಿಂತೆ..!
12 ವರ್ಷಗಳ ದಾಖಲೆಗಳನ್ನ ಹೇಗೆ ನೀಡೋದು ಎಂದು ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಅವರು ಪ್ರಶ್ನೆ ಮಾಡಿದ್ದಾರೆ. ನಾಲ್ಕೈದು ದಾಖಲೆಗಳಲ್ಲಿ ಒಂದಾದ್ರೂ ನೀಡಿ ಎಂದು ಮಾಧುಸ್ವಾಮಿ ಹೇಳಿದ್ದಾರೆ. ಈ ನಡುವೆ ಮಾಧುಸ್ವಾಮಿ ಮಾತನಾಡುವಾಗ ಸಚಿವ ವಿ. ಸೋಮಣ್ಣ ಮಧ್ಯಪ್ರವೇಶಿಸಿದಾಗ ಮಾತಿಗೆ ಮಾತು ಬೆಳೆದಿದೆ.