ಕೋಪಿಷ್ಠ ಕೊಳಕು ಮಂಡಲ ಹಾವನ್ನೇ ನುಂಗಿದ ನಾಗರ, ಇಲ್ಲಿದೆ ವಿಡಿಯೋ

Mar 3, 2020, 2:20 PM IST

ಮಡಿಕೇರಿ(ಮಾ.03): ಕೋಪಿಷ್ಠ ಕೊಳಕು ಮಮಡಲ ಹಾವನ್ನು ನಾಗರಹಾವು ನುಂಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಕೊಳಕು ಮಂಡಲ ಹಾವನ್ನು ಸ್ವಾಹ ಮಾಡಿದ ನಾಗರಾಜನ ವಿಡಿಯೋ ವೈರಲ್ ಆಗಿದೆ.

ಕೋಪಿಷ್ಠ ಕೊಳಕು ಮಂಡಲ ಹಾವು ಕಡಿದು ತುಂಬು ಗರ್ಭಿಣಿ ಸಾವು

ನಾಗರ ಹಾವೊಂದು ಅತ್ಯಂತ ಕೋಪಿಷ್ಠ ಕೊಳಕು ಮಂಡಲ ಹಾವನ್ನು ನುಂಗುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ವಿರಾಜಪೇಟೆ ತಾಲೂಕಿನ ಕಾರ್ಮಾಡುವಿನಲ್ಲಿ ಘಟನೆ ನಡೆದಿದ್ದು, ಕಾರ್ಮಾಡು ಗ್ರಾಮದ ಮಧು ಎಂಬವರ ಮನೆ ಸಮೀಪ ಘಟನೆ ನಡೆದಿದೆ. ಹೆಡೆ ಬಿಚ್ಚಿದ ನಾಗರಹಾವು ಕೊಳಕು ಮಂಡಲ ಹಾವನ್ನು ನಿಧಾನವಾಗಿ ನುಂಗಿದೆ.