ಎಲ್ಲಾ ಹಣವನ್ನ ಕ್ಯಾಷ್‌ಗೆ ಕನ್ವರ್ಟ್ ಮಾಡಿ ನುಂಗಲು ಸಿದ್ದತೆ..? ಕುರಿಗಾಹಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿತ್ತು ಲಕ್ಷ ಲಕ್ಷ..!

Jun 29, 2024, 12:05 PM IST

ವಾಲ್ಮೀಕಿ ನಿಗಮದಲ್ಲಿ(Valmiki Corporation) 187 ಕೋಟಿ ರೂ. ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ 187 ಕೋಟಿಯನ್ನೂ ಗುಳುಂ ಮಾಡುವ ಉದ್ದೇಶದಿಂದ ವರ್ಗಾವಣೆ ಮಾಡಲಾಗಿದೆಯಂತೆ. ಎಸ್ಐಟಿ (SIT) ತನಿಖೆಯಲ್ಲಿ ದಂಧೆಕೋರರ ದುರುದ್ದೇಶ ಅನಾವರಣವಾಗಿದೆ. ಮೇಲ್ನೋಟಕ್ಕೆ ಹಣ ವಾಪಸ್ ಹಾಕುವ ಉದ್ದೇಶವೇ ಇರಲಿಲ್ಲವಂತೆ. ಅಷ್ಟೂ ಹಣವನ್ನ ಕ್ಯಾಶ್‌ಗೆ ಕನ್ವರ್ಟ್ ಮಾಡಿ ನುಂಗುವ ಉದ್ದೇಶ ಹೊಂದಲಾಗಿತ್ತಂತೆ. ಎಲ್ಲಾ ಹಣ ನುಂಗಿ ನಕಲಿ ದಾಖಲೆಗಳನ್ನ ಸೃಷ್ಟಿಸುವ ಪ್ಲ್ಯಾನ್ ಮಾಡಲಾಗಿದ್ದು, ನಿಗಮದ ಖಾತೆಗೆ ಹಣ ವಾಪಸ್ ಹಾಕುವ ಉದ್ದೇಶವೇ ಇರಲಿಲ್ಲವಂತೆ. ಎಲ್ಲಾ ಹಣವನ್ನ ಕ್ಯಾಷ್ ಕನ್ವರ್ಟ್ ಮಾಡಿ ನುಂಗಲು ಸಿದ್ದರಾಗಿದ್ರು. 94 ಕೋಟಿ ರೂ. ನಕಲಿ ಅಕೌಂಟ್‌ಗೆ ವರ್ಗಾವಣೆ ಮಾಡಲಾಗಿತ್ತು. 200 ಅಕೌಂಟ್‌ಗಳಿಗೆ ವರ್ಗಾವಣೆ ಆಗಿತ್ತು ಆ 94 ಕೋಟಿ ರೂಪಾಯಿ. ಆ 200 ಅಕೌಂಟ್‌ಗಳನ್ನೂ ಫ್ರೀಜ್ ಮಾಡಿಸಿರುವ ಎಸ್ಐಟಿ ಅಧಿಕಾರಿಗಳು. 94 ಕೋಟಿ ರೂಪಾಯಿಯಲ್ಲಿ ಸುಮಾರು 35 ಕೋಟಿ ರೂ. ರಿಕವರಿ ಮಾಡಲಾಗಿದ್ದು, ಸತ್ಯನಾರಾಯಣ್ ವರ್ಮಾನಿಂದ ಕ್ಯಾಷ್, ಗೋಲ್ಡ್ ಸೇರಿ 15 ಕೋಟಿ ಸೀಜ್ ಮಾಡಲಾಗಿದೆ. ಅಕೌಂಟ್‌ಳಲ್ಲಿ 9.5 ಕ್ಯಾಷ್, 5 ಕೋಟಿ ಮೌಲ್ಯದ ಕಾರುಗಳು ಸೀಜ್ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ:  ವಿದೇಶ ಪ್ರವಾಸಕ್ಕೆ ತೆರಳಲು ಸಜ್ಜಾದ್ರಾ ಶಾಸಕರು..? ಎಂಎಲ್‌ಎಗಳ ಮನವಿಗೆ ಸ್ಪೀಕರ್ ಖಾದರ್‌ ಪುರಸ್ಕಾರ ಸಿಗುತ್ತಾ..!?