Nov 23, 2021, 10:15 AM IST
ಕಲಬುರಗಿ (ನ.23): ರಾಜ್ಯದಲ್ಲಿ ಅನೇಕ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿ (Rain) ಬೆಳೆಗಳು ಸರ್ವನಾಶವಾಗುತ್ತಿವೆ. ಆದರೆ ಕಲಬುರಗಿ (Kalaburagi) ಜಿಲ್ಲೆಯಲ್ಲಿ ಮಳೆ ಇಲ್ಲದಿದ್ದರೂ ಬೆಳೆ ಹಾನಿಯಾಗುತ್ತಿದೆ. ಅತಿಯಾದ ಮಂಜು ಸುರಿಯುತ್ತಿದ್ದು ತೊಗರಿ ಬೆಳೆಗಳ (Tur Dal ) ಮೇಲೆ ಮಾರಕ ಪರಿಣಾಮವನ್ನು ಉಂಟು ಮಾಡುತ್ತಿದೆ. ರೈತರು ಮಂಜಿನಿಂದ ಕಂಗಾಲಾಗುವಂತಾಗಿದೆ.
Karnataka Rain: ಅಕಾಲಿಕ ಮಳೆಗೆ ಮನೆಗೆ ಬರಲಿಲ್ಲ ಬೆಳೆ, ರೈತ ಕಂಗಾಲು, ರಾಜ್ಯ ತತ್ತರ
ಬೆಳೆದು ನಿಂತ ತೊಗರಿ ಬೆಳೆ ಮೇಲೆ ವ್ಯಾಪಕ ಪ್ರಮಾಣದಲ್ಲಿ ಮಂಜು ಸುರಿಯುತ್ತಿರುವುದರಿಂದ ರೋಗ ಬಾಧೆಗೆ ತುತ್ತಾಗುತ್ತಿದೆ ಬೆಳೆ. ತೊಗರಿ ಬೆಳೆಗೆ ಗೊಡ್ಡು ರೋಗ ಬಾಧೆ ಕಾಡುತ್ತಿದ್ದು ಇದರಿಂದ ರೈತ ಸಮುದಾಯ ಕಂಗಾಲಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ. ಕೆಲ ದಿನಗಳ ಹಿಂದೆ ಮಳೆಯಿಂದ ಹಾನಿಯಾದರೆ ಇದೀಗ ಮಂಜಿನಿಂದ ರೋಗ ಕಾಡುತ್ತಿದೆ. ಹೂವು ಮತ್ತು ಗೊನೆ ನೆಲಕ್ಕೆ ಉದುರುತ್ತಿದೆ. ಉತ್ತಮ ರೀತಿಯಲ್ಲಿ ಫಸಲಿನ ನಿರೀಕ್ಷೆಯಲ್ಲಿದ್ದ ರೈತ ಸಮುದಾಯಕ್ಕೆ ಆತಂಕ ಕಾಡುತ್ತಿದೆ.