Dec 7, 2019, 10:43 AM IST
ತುಮಕೂರು(ಡಿ.07): ಕಬ್ಬಿಣದ ಕಂಬಿ ಸಂದಿಯಲ್ಲಿ ವ್ಯಕ್ತಿಯ ಕಾಲು ಸಿಲುಕಿ ಹಾಕಿಕೊಂಡು ಕಾಲು ಹೊರ ತೆಗೆಯಲು ಹರಸಾಹಸ ಪಡಬೇಕಾದ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಪ್ರವಾಸಿ ಮಂದಿರದ ಪ್ರವೇಶದ್ವಾರದ ಮುಂದೆ ಘಟನೆ ನಡೆದಿದ್ದು, ಶಿರಾಗೇಟ್ ನಿವಾಸಿ ಮಾರುತಿ ಎಂಬುವವರ ಕಾಲಿಗೆ ಗಾಯವಾಗಿದೆ. ಒಳಚರಂಡಿಗೆ ಅಳವಡಿಸಿದ ಕ್ಯಾಟಲ್ ಟ್ರಾಕ್‌ನ ಕಂಬಿಗಳ ನಡುವೆ ಕಾಲು ಸಿಕ್ಕಿಹಾಕಿಕೊಂಡಿದೆ.
ಎನ್‌ಕೌಂಟರ್ ಸಂಭ್ರಮಾಚರಣೆಯಲ್ಲೂ ಕಾಮುಕನ ಕಾಟ, ರೋಡ್ ರೋಮಿಯೋಗೆ ಧರ್ಮದೇಟು
ಅಗ್ನಿಶಾಮಕ ದಳ, ಪೊಲೀಸರಿಂದ ಅರ್ಧ ಗಂಟೆಗಳ ಕಾರ್ಚರಣೆ ನಡೆದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಕಂಬಿ ಕಟ್ ಮಾಡಿ ಕಾಲು ಹೊರ ತೆಗೆದಿದ್ದಾರೆ. ಕಂಬಿಗಳ ನಡುವಿನ ಅಂತರ ಹೆಚ್ಚಾಗಿರುವುದು ಘಟನೆಗೆ ಕಾರಣವಾಗಿದೆ. ಅವೈಜ್ಞಾನಿಕವಾಗಿ ಕ್ಯಾಟ್ಲ್ ಟ್ರಾಕ್ ಅಳವಡಿಸಿದ ಲೋಕೋಪಯೋಗಿ ಇಲಾಖೆ ವಿರುದ್ದ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಣ್ಮಗಳ ಮೇಲೆ ಅಟ್ಟಹಾಸ ಮೆರೆದವರು: ಹೆಣವಾಗಿ ಪ್ಲ್ಯಾಸ್ಟಿಕ್ ಬ್ಯಾಗ್‌ಲ್ಲಿ ನರಕಕ್ಕೆ ಸಾಗಿದರು!