Belagavi: ಪರಸ್ಪರ ಬಡಿದಾಡಿಕೊಂಡ ಟ್ರಾಫಿಕ್‌ ಪೊಲೀಸ್‌, ಸರ್ಕಾರಿ ಬಸ್‌ ಕಂಡಕ್ಟರ್‌

Dec 8, 2021, 1:40 PM IST

ಬೆಳಗಾವಿ(ಡಿ.08):  ಟ್ರಾಫಿಕ್‌ ಪೊಲೀಸ್‌ ಹಾಗೂ ಸರ್ಕಾರಿ ಬಸ್‌ ನಿರ್ವಾಹಕ ಬಡಿದಾಡಿಕೊಂಡ ಘಟನೆ ಬೆಳಗಾವಿಯಲ್ಲಿ ಇಂದು(ಬುಧವಾರ) ನಡೆದಿದೆ. ಬಸ್‌ ನಿಲ್ಲಿಸುವ ವಿಚಾರಕ್ಕೆ ಇಬ್ಬರ ಮಧ್ಯೆ ಮಾರಾಮಾರಿ ನಡೆದಿದೆ. ನಗರದ ಚೆನ್ನಮ್ಮ ವೃತ್ತದ ಸಿಗ್ನಲ್‌ ಮಧ್ಯೆ ಸಾರಿಗೆ ಬಸ್‌ಅನ್ನ ನಿಲ್ಲಿಸಲಾಗಿತ್ತು. ಸಿಗ್ನಲ್‌ ಮಧ್ಯೆ ಬಸ್‌ ನಿಲ್ಲಿಸಿದ್ದಕ್ಕೆ ಟ್ರಾಫಿಕ್‌ ಪೇದೆ ಸಿಡಿದೆದ್ದಿದ್ದಾರೆ. ಟ್ರಾಫಿಕ್‌ ಪೇದೆಗೆ ಅವಾಚ್ಯ ಶಬ್ದಗಳಿಗೆ ಬಸ್‌ ಚಾಲಕ ನಿಂದಿಸಿದ್ದಾರೆ. ಹೀಗಾಗಿ ಸಿಟ್ಟಿಗೆದ್ದ ಟ್ರಾಫಿಕ್‌ ಪೊಲೀಸ್‌ ಬಸ್‌ ಕಂಡಕ್ಟರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಬಳಿಕ ಟ್ರಾಫಿಕ್‌ ಪೇದೆಯ ಕಪಾಳಕ್ಕೆ ಬಾರಿಸಿದ್ದಾರೆ ಬಸ್‌ ನಿರ್ವಾಹಕ. ಇಬ್ಬರ ಮಾರಾಮಾರಿಯಿಂದ ಅಲ್ಲಿದ್ದ ಜನರಿಗೆ ಬಿಟ್ಟಿ ಮನರಂಜನೆ ಸಿಕ್ಕಿದೆ. 

Omicron Threat: ಜರ್ಮನಿಯಿಂದ ಬಂದ ಇಬ್ಬರಲ್ಲಿ ಸೋಂಕು, ಒಬ್ಬ ಸೋಂಕಿತ ಎಸ್ಕೇಪ್.!