ಕಟೀಲು ಯಕ್ಷಗಾನ ಮೇಳಗಳ ಕಾಲಮಿತಿಗೆ ವಿರೋಧ: ಯಕ್ಷಪ್ರಿಯರಿಂದ ಪಾದಯಾತ್ರೆ

Nov 6, 2022, 10:50 AM IST

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಾತ್ರಿಯಿಂದ ಬೆಳಗ್ಗಿನವರೆಗೆ ನಡೆಯುತ್ತಿದ್ದ ಯಕ್ಷಗಾನ ದೇವರ ಸೇವೆಯನ್ನು ರಾತ್ರಿ 10ರ ಒಳಗೆ ಮುಗಿಸಬೇಕೆನ್ನುವ ಆಡಳಿತ ಮಂಡಳಿಯ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಮಂಗಳೂರಿನಲ್ಲಿ ಇಂದು  ಯಕ್ಷಗಾನಪ್ರಿಯರಿಂದ ಶಕ್ತಿ ಪ್ರದರ್ಶನ ನಡೆಯಲಿದ್ದು, ಕಟೀಲು ಶ್ರೀದುರ್ಗಾಪರಮೇಶ್ವರಿ ದೇಗುಲದ ಮೇಳಗಳು ಅಮ್ಮನೆಡೆಗೆ ನಮ್ಮ ನಡೆ ಹೆಸರಿನಲ್ಲಿ ಪಾದಯಾತ್ರೆ ಮಾಡಲಿವೆ. ಶ್ರೀ ಕಟೀಲು ಯಕ್ಷಸೇವಾ ಸಮನ್ವಯ ಸಮಿತಿ ಹೆಸರಿನಲ್ಲಿ ಪಾದಯಾತ್ರೆ ನಡೆಯಲಿದ್ದು, ಧಾರ್ಮಿಕ ಆಚರಣೆಗೆ ನಿರ್ಬಂಧ ವಿಧಿಸಿದ್ದರ ವಿರುದ್ಧ ಯಕ್ಷಪ್ರಿಯರು ಕಿಡಿ ಕಾರಿದ್ದಾರೆ.

ತಿಮ್ಮಪ್ಪನಿಗೆ ದೇಶದ ಎಷ್ಟು ಕಡೆ ಆಸ್ತಿ ಇದೆ: ಇರುವ ಬಂಗಾರವೆಷ್ಟು? ಬ್ಯಾಂಕಲ್ಲಿರುವ ದುಡ್ಡೆಷ್ಟು ಗೊತ್ತಾ?