ಬಳ್ಳಾರಿಯಲ್ಲಿ ಕೊರೋನಾ ಹೆಚ್ಚಾಗಲು ಕಾರಣ ಬಹಿರಂಗ..!

Jul 22, 2020, 6:27 PM IST

ಬಳ್ಳಾರಿ(ಜು.22): ಗಣಿನಾಡು ಬಳ್ಳಾರಿಯಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆ ಬಳ್ಳಾರಿಯಲ್ಲಿ ಕೊರೋನಾ ಸೋಂಕು ಹೆಚ್ಚಾಗಲು ಕಾರಣ ಏನು ಎನ್ನುವ ಆಘಾತಕಾರಿ ಅಂಶ ಬಯಲಾಗಿದೆ.

ಥೈರೋಕೇರ್ ಆಂಟಿ ಬಾಡಿ ಟೆಸ್ಟ್ ಸರ್ವೇಯಲ್ಲಿ ಮಾಹಿತಿ ಬಹಿರಂಗವಾಗಿದ್ದು, ಬಳ್ಳಾರಿಯ ವಿದ್ಯಾನಗರದಲ್ಲಿ ಅತಿ ಹೆಚ್ಚು ಸೋಂಕು ಪತ್ತೆಯಾಗಲು ಆ ಏರಿಯಾದಲ್ಲಿ ವಾಸವಾಗಿರುವವರ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಹೀಗಾಗಿದೆ ಎನ್ನುವ ಅಂಶ ಬಯಲಾಗಿದೆ.

ಕೊರೋನಾ ಹಬ್ ಆಗ್ತಿದೆಯಾ ಶಾಂತಲಾ ನಗರ..?

ರಾಜ್ಯದಲ್ಲಿ ಜ್ಯುಬಿಲಿಯೆಂಟ್ ಕಾರ್ಖಾನೆ ಬಳಿಕ ಜಿಂದಾಲ್‌ನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಜಿಂದಾಲ್ ಕಾರ್ಖಾನೆ ವಿದ್ಯಾನಗರದಲ್ಲೇ ಇದೆ. ಥೈರೋಕೇರ್ ಸಂಸ್ಥೆ ದೇಶದ 600 ಪ್ರದೇಶಗಳಲ್ಲಿ ಸರ್ವೆ ಮಾಡಿತ್ತು. ಈ 600 ಪ್ರದೇಶಗಳಲ್ಲಿ ಬಳ್ಳಾರಿಯ ವಿದ್ಯಾನಗರ ಕೂಡಾ ಒಂದಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.