ಕೊರೋನಾ ಹಬ್ ಆಗ್ತಿದೆಯಾ ಶಾಂತಲಾ ನಗರ..?

ಬೆಂಗಳೂರಿನಲ್ಲಿ ಜುಲೈ 15ರಿಂದೀಚೆಗೆ ಶಾಂತಲಾ ವಾರ್ಡ್‌ನಲ್ಲಿ ಇದುವರೆಗೂ 700ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ವಾರ್ಡ್‌ನಲ್ಲಿ ಕೊರೋನಾ ನಿಯಂತ್ರಿಸಲು ಬಿಬಿಎಂಪಿ ಹರಸಾಹಸ ಪಡುತ್ತಿದೆ.

First Published Jul 22, 2020, 5:44 PM IST | Last Updated Jul 22, 2020, 5:44 PM IST

ಬೆಂಗಳೂರು(ಜು.22): ಕಳೆದೊಂದು ವಾರದಿಂದ ಬೆಂಗಳೂರಿನ ಶಾಂತಲಾ ನಗರ ಕೊರೋನಾ ಹೆಚ್ಚಳದ ವಿಚಾರದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ. ಪ್ರತಿದಿನ ಈ ವಾರ್ಡ್‌ನಲ್ಲಿ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟುತ್ತಿದೆ.

ಜುಲೈ 15ರಿಂದೀಚೆಗೆ ಶಾಂತಲಾ ವಾರ್ಡ್‌ನಲ್ಲಿ ಇದುವರೆಗೂ 700ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ವಾರ್ಡ್‌ನಲ್ಲಿ ಕೊರೋನಾ ನಿಯಂತ್ರಿಸಲು ಬಿಬಿಎಂಪಿ ಹರಸಾಹಸ ಪಡುತ್ತಿದೆ.

ಸ್ವಾಬ್ ಟೆಸ್ಟ್ ಕೇಂದ್ರಗಳೇ ಜನರಿಗೆ‌ ಕೊರೊನಾ ಸೋಂಕು..!

ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶಾಂತಲಾ ವಾರ್ಡ್‌ನಲ್ಲಿ ಪ್ರತಿದಿನ ಸರಾಸರಿ ನೂರು ಕೇಸ್‌ಗಳು ಪತ್ತೆಯಾಗುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.