ಪಾಪ... ದಿನಸಿ ಖರೀದಿ, ವಾಕಿಂಗ್, ಕುಂಟು ನೆಪ ಹೇಳಿ ರಸ್ತೆಗೆ ಇಳಿದವರ ಕತೆ ನೋಡಿ!

Apr 23, 2020, 3:21 PM IST

ಬೆಳಗಾವಿ/ ಶಿವಮೊಗ್ಗ(ಏ. 23)  ಕೊರೋನಾ ಲಾಕ್ ಡೌನ್ ಸಂದರ್ಭ ಎಲ್ಲ ಕಡೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.  ಆದರೂ ಇಲ್ಲ ಸಲ್ಲದ ಕಾರಣ ಕೊಟ್ಟು ಓಡಾಡುವ ಮಂದಿಗೆ ಏನೂ ಕಡಿಮೆ ಇಲ್ಲ.

ಮನೆಯಿಂದ ಆಚೆ ಬಂದವರಿಗೆ ಕೊಪ್ಪಳ ಪೊಲೀಸರ ಡಿಫರೆಂಟ್ ಟ್ರೀಟ್ ಮೆಂಟ್

ಎಷ್ಟೆ ಎಚ್ಚರಿಕೆ ವಹಿಸಿದರೂ ಬೆಳಗಾವಿಯಲ್ಲಿ ಬೆಳಗ್ಗೆಯೇ ಬೈಕ್ ಸವಾರರು ರಸ್ತೆಗೆ ಇಳಿದಿದ್ದರು. ಶಿವಮೊಗ್ಗದಲ್ಲಿ ದಿನಸಿ ಖರೀದಿ ಹೆಸರಿನಲ್ಲಿ ಓಡಾಡುತ್ತಿದ್ದ ಮಹಿಳೆಯರಿಗೂ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ವಾಕಿಂಗ್ ಹೋದವರನ್ನು ಲೆಫ್ಟ್ ರೈಟ್ ತೆಗೆದುಕೊಂಡ ಡಿಸಿ ಶಿವಕುಮಾರ್ ಹಾಗೂ ಎಸ್ ಪಿ ಶಾಂತರಾಜು ಸರಿಯಾಗಿ ವ್ಯಾಯಾಮ ಮಾಡಿ ಎಚ್ಚರಿಕೆ ನೀಡಿ ಮನೆಗೆ ಕಳಿಸಿದ್ದಾರೆ.