ಸುಂದರ ಸಿರಿಮನೆ ಫಾಲ್ಸ್‌ಗೆ ಸದ್ಯ ಪ್ರವಾಸಿಗರಿಗೆ ನಿಷೇಧ

Jul 25, 2021, 4:01 PM IST

ಶೃಂಗೇರಿ (ಜು.25): ಬೃಹದಾಕಾರದ ಬಂಡೆಗಳ ನಡುವೆ ಭೋರ್ಗರೆತದ ಶಬ್ದ, ಹೊಲ್ನೊರೆಯಂತೆ ಧುಮ್ಮಿಕ್ಕುವ ಮನಮೋಹಕ ಜಲಪಾತದ ದೃಶ್ಯ ಕಾವ್ಯ, ಜೊತೆಗೆ ಸುತ್ತಲೂ  ಹಚ್ಚಹಸಿರಿನ ಕಾನನ.. ಹೌದು... ದಟ್ಟಕಾನನದ ಮಧ್ಯೆ ಧುಮ್ಮಿಕ್ತಿರೋ ಈ ಜಲಪಾತ ಸಿರಿಮನೆ ಫಾಲ್ಸ್. 

ಬೆಳಗಾವಿ: ಗೋಕಾಕ ಫಾಲ್ಸ್‌ ವೀಕ್ಷಣೆಗೆ ಮತ್ತೆ ಬ್ರೇಕ್‌..!

ಸುಮಾರು 90 ರಿಂದ 100 ಅಡಿ ಎತ್ತರದಿಂದ ಬೀಳೋ ಈ ಗಂಗಾಮಾತೆಗೆ ಪ್ರವಾಸಿಗರು ಮಿನಿ ಜೋಗ ಎಂದೂ ಹೆಸರಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿರೋ ಈ ಫಾಲ್ಸ್ಗೆ ಶೃಂಗೇರಿಯಿಂದ ಕೇವಲ 18 ಕಿ.ಮೀ. ದೂರ. ಒಮ್ಮೆ ಈ ಸ್ಥಳಕ್ಕೆ ಬಂದು ನೋಡಿದ್ರೆ ಎಷ್ಟೆ ದೂರದಿಂದ ಬಂದಿದ್ರು ಆಯಾಸವೆಲ್ಲಾ ಮಂಗಮಾಯ.  ಆದರೆ ಸದ್ಯ ಜಲಪಾತ ನೋಡುವ ಭಾಗ್ಯ ಪ್ರವಾಸಿಗರಿಂದ ದೂರವಾಗಿದೆ. ಸಿರಿಮನೆ ಜಲಪಾತದ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ದಿ ಉದ್ದೇಶದಿಂದ ಜಿಲ್ಲಾಡಳಿತ ಪ್ರವಾಸಿಗರಿಗೆ ನಿಷೇಧ ಹೇರಿದೆ.