ಕ್ಯಾಮರಾದಲ್ಲಿ ಸೆರೆಯಾದ ಕಾಳಿಂಗ ಮಿಲನ, ಆಗುಂಬೆ ಸಂಜೆಯಲ್ಲೊಂದು ಅಪರೂಪದ ದೃಶ್ಯ

Apr 16, 2020, 9:53 PM IST

ಕಾರ್ಕಳ (ಏ. 16)  ಕಾಳಿಂಗ ಸರ್ಪಗಳೆರಡು‌ ಕಾಡಿನಿಂದ ಹೊರಕ್ಕೆ‌ ಬಂದು ಮಿಥುನ ಕ್ರಿಯೆ ಯಲ್ಲಿ ತೊಡಗಿಸಿಕೊಂಡ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ತಾಲೂಕಿನ  ಮಾಳಗ್ರಾಮದಲ್ಲಿ ದೃಶ್ಯ ಸೆರೆಯಾಗಿದೆ.

ಮಾಳಗ್ರಾಮದ ಮುಳ್ಳೂರು ಗೇಟ್ ಸಮೀಪದ ಗಣೇಶ್ ಶೆಟ್ಟಿಗಾರ್ ಎಂಬುವರ ‌ಮನೆಗೆ ಅಂಗಳದಲ್ಲಿ ಸುಮಾರು 12ಅಡಿ ಉದ್ದದ ಗಂಡು ಸರ್ಪ‌ ಹಾಗೂ‌ 10 ಅಡಿ‌ ಉದ್ದ ಹೆಣ್ಣು ಕಾಳಿಂಗ ಸರ್ಪಗಳೆರಡು ಮಿಥುನ ಕ್ರಿಯೆಯಲ್ಲಿ ತೊಡಗಿಕೊಂಡಿದ್ದವು.  ಉರಗ ತಜ್ಞ ಅನಿಲ್ ಪ್ರಭು ಅವರಿಗೆ ಮಾಹಿತಿ ನೀಡಿದ್ದಾರೆ.ಅನಿಲ್ ಪ್ರಭು ಸ್ಥಳಕ್ಕೆ ‌ಅಗಮಿಸಿ ಜೋಡಿ ಕಾಳಿಂಗ‌ ಹಾವನ್ನು ಸೆರೆಹಿಡಿದು ಕುದುರೆ ಮುಖ ಅಭಯಾರಣ್ಯಕ್ಕೆ ಬಿಡಲಾಯಿತು.

ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ, ಕಾರಣ ಏನು?

ಕಳೆದ‌‌ ಎರಡು ದಿನಗಳ‌ ಹಿಂದೆ ಮಳೆ‌ ಸುರಿದ ಪರಿಣಾಮ  ವಾತಾವರಣ ತಂಪಾಗಿದ್ದು ಇವುಗಳು ಇದೀಗ ದಟ್ಟ ಕಾಡಿನಿಂದ ಹೊರಕ್ಕೆ ‌ಬರಲಾರಂಭಿಸಿದೆ. ಅಲ್ಲದೆ ಮಾಳ ಮುಳ್ಳೂರು ಘಾಟಿ ಆಗುಂಬೆಗೆ ‌ಸಂಪರ್ಕ ಹೊಂದಿರುವುದಿಂದ ಈ ಭಾಗದಲ್ಲಿ ಅವುಗಳ ಸಂಚಾರ ಕಂಡು‌ಬರುತ್ತಿದೆ.