Aug 17, 2022, 12:44 PM IST
ಯಾದಗಿರಿ(ಆ.17): ಬರೋಬ್ಬರಿ 1 ಕೋಟಿ ವೆಚ್ಚದಲ್ಲಿ ಕಟ್ಟಿರೋ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ ಮಾಡಿದ್ರೂ ಕೂಡ ಮೀನು ಮಾರಾಟಗಾರರು ಮಾತ್ರ ರಸ್ತೆ ಪಕ್ಕ ಮೀನು ಮಾರಾಟ ಮಾಡುತ್ತಿದ್ದಾರೆ. ನಗರದ ಲಾಲ್ಬಹಾದ್ದೂರ್ ಶಾಸ್ತ್ರಿ ಚೌಕ್ ಬಳಿಯ ರಸ್ತೆಯ ಪಕ್ಕದಲ್ಲಿ ಮೀನು ಮಾರಾಟ ಮಾಡಲಾಗುತ್ತಿದೆ. ಪ್ರತಿ ದಿನ ಇಲ್ಲಿಯೇ ಮೀನು ಮಾರಾಟ ಮಾಡಲಾಗುತ್ತಿದೆ. ಆದರೆ, ಇದಕ್ಕೆಲ್ಲಾ ಕಾರಣ ಸುಸಜ್ಜಿತವಾಗಿ ಕಟ್ಟಿದ ಮೀನು ಮಾರುಕಟ್ಟೆಗೆ ಸೂಕ್ತ ರಸ್ತೆ ಇಲ್ಲದೆ ರೋಡ್ ಪಕ್ಕ ಮೀನು ಮಾರಾಟ ನಡೆಯುತ್ತಿದೆ. ಸರಿಯಾದ ರಸ್ತೆ ವ್ಯವಸ್ಥೆ ಮಾಡಿಕೊಟ್ಟರೆ ನಾವು ಅಲ್ಲಿಯೇ ಮೀನು ಮಾರಾಟ ಮಾಡುತ್ತೇವೆ ಅಂತ ಮೀನು ಮಾರಾಟಗಾರರು ಆಗ್ರಹಿಸಿದ್ದಾರೆ.