Jan 8, 2023, 11:04 AM IST
'ಚಾಮರಾಜನಗರ-25' ಎಂಬ ವಿಶೇಷ ಸಂಚಿಕೆಯನ್ನು ಕನ್ನಡ ಪ್ರಭ ಪತ್ರಿಕೆ ಬಿಡುಗಡೆ ಮಾಡಿದ್ದು, 44 ಪುಟಗಳ ವಿಶೇಷ ಸಂಚಿಕೆ ಇದಾಗಿದೆ. ಜಿಲ್ಲೆಯ ರಾಜಕೀಯ, ಸಾಂಸ್ಕ್ರತಿಕ ಸೇರಿ ಸಮಗ್ರ ಚಿತ್ರಣ ಒಳಗೊಂಡಿದೆ. ಕನ್ನಡ ಪ್ರಭದ ಈ ಸಂಚಿಕೆಗೆ ಸಚಿವ ವಿ ಸೋಮಣ್ಣ ಸೇರಿ ಗಣ್ಯರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಚಾಮರಾಜನಗರದ ಪೊಲೀಸ್ ಕವಾಯತು ಮೈದಾನದಲ್ಲಿ ವಿಶೇಷ ಸಂಚಿಕೆಯನ್ನು ವಿ. ಸೋಮಣ್ಣ ಬಿಡುಗಡೆ ಮಾಡಿದ್ದಾರೆ. ಕನ್ನಡ ಪ್ರಭ ಪತ್ರಿಕೆಗೆ ಸಂಪಾದಕಾರದ ರವಿ ಹೆಗಡೆಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಾಹಕ ಸಂಪಾದಕ ಅಂಶಿ ಪ್ರಸನ್ನಕುಮಾರ್, ಶಾಸಕರಾದ ಸಿ. ಪುಟ್ಟರಂಗ ಶೆಟ್ಟಿ, ಆರ್. ನರೇಂದ್ರ ಹಾಗೂ ಸಿ.ಎಸ್ ನಿರಂಜನ ಕುಮಾರ್ ಭಾಗಿಯಾಗಿದ್ದರು.