Nov 17, 2021, 10:12 PM IST
ಧಾರವಾಡ(ನ. 17) ಪುನೀತ್ ರಾಜಕುಮಾರ ನಿಧನದ ನಂತರ ಅವರು ದಾನ ಮಾಡಿದ್ದ ಕಣ್ಣುಗಳನ್ನು ನಾಲ್ಕು ಜನರಿಗೆ ಬೆಳಕು ಕೊಟ್ಟಿವೆ. ಇದೇ ಒಂದು ಕಾರಣಕ್ಕೆ ಇಡಿ ರಾಜ್ಯದ ಜನರು ಅವರ ದಾರಿಯಲ್ಲಿ ಹೋಗುತಿದ್ದಾರೆ. ನೇತ್ರದಾನ ಮಾಡಲು ಜನ ಮುಂದೆ ಬರುತಿದ್ದಾರೆ. ಸದ್ಯ ಪುನೀತ್ ಕಣ್ಣು ದಾನ ಮಾಡಿದ್ದನ್ನ ನೋಡಿದ ಶಾಸಕರೊಬ್ಬರು ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದಾರೆ.
ಶಾಸಕ ಎಂಪಿ ರೇಣುಕಾಚಾರ್ಯರಿಂದಲಲೂ ಮಾದರಿ ಹೆಜ್ಜೆ
ಶಾಸಕ ಅಮೃತ ದೇಸಾಯಿ ಕೂಡಾ ತನ್ನ ಕುಟುಂಬದ ಜೊತೆಯಲ್ಲಿ ಕಣ್ಣು ದಾನಮಾಡಲು ನಿರ್ಧರಿಸಿದ್ದಾರೆ. ಧಾರವಾಡ ಶಾಸಕ ಅಮೃತ ದೇಸಾಯಿ ತಮ್ಮ 44 ನೇ ಜನ್ಮದಿನ ಆಚರಣೆ ಮಾಡಿಕೊಂಡಿದ್ದು, ಶಾಸಕರ ಬೆಂಬಲಿಗರು ರಕ್ತ ದಾನ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಆದರೆ ಶಾಸಕ ಅಮೃತ ದೇಸಾಯಿ ನಾನೂ ಹಾಗೂ ನನ್ನ ಪತ್ನಿ ಪ್ರಿಯಾ ಕಣ್ಣು ದಾನ ಮಾಡ್ತೆವೆ ಎಂದಿದ್ದಕ್ಕೆ, ಅದೇ ಕಾರ್ಯಕ್ರಮದಲ್ಲಿ ಕಣ್ಣು ದಾನ ಕಾರ್ಯಕ್ರಮ ಕೂಡಾ ನಡೆಸಲಾಯಿತು. ಪುನೀತ್ ರಾಜಕುಮಾರ ಅವರು ನಿಧನದ ನಂತರವೂ ಆ ಕಣ್ಣು ದಾನ ಪಡೆದವರ ಮನದಲ್ಲಿ ಇರಲಿದ್ದಾರೆ, ಅದೇ ರೀತಿ ನಾವು ಕೂಡಾ ಜನರ ಮನದಲ್ಲಿ ಇರಬೇಕಾದ್ರೆ, ನಮ್ಮ ಕಣ್ಣು ದಾನ ಮಾಡಬೇಕು ಎಂದು ಶಾಸಕರು ಹೇಳಿದರು.
ಈ ಶಾಸಕರು ಕಣ್ಣು ದಾನ ಮಾಡುತಿದ್ದಾರೆ ಎಂದು ತಿಳಿದ ಇವರ ಬೆಂಬಲಿಗರೂ ಕೂಡಾ ಕಣ್ಣು ದಾನ ಮಾಡಿದ್ದಾರೆ. ಸದ್ಯ 200 ಕ್ಕೂ ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ನೇತ್ರದಾನಕ್ಕೆ ಸಹಿ ಹಾಕಿದ್ದಾರೆ.