ಕರಾವಳಿಯ ಗಲ್ಲಿಗಲ್ಲಿಗಳಲ್ಲಿ ಕಟ್ಟೆಚ್ಚರ: ಪೊಲೀಸರಿಂದ ರೂಟ್‌ ಮಾರ್ಚ್

Jul 29, 2022, 7:16 PM IST

ಮಂಗಳೂರು (ಜು. 29): ಸುಳ್ಯದ ಬೆಳ್ಳಾರೆಯಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಯ ಉದ್ವಿಗ್ನತೆ ಸಹಜ ಸ್ಥಿತಿಗೆ ಬರುವ ಮೊದಲೇ  ಮಂಗಳೂರಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಲು ಸಾಲು ಕೊಲೆಗಳಿಂದಾಗಿ ಮಂಗಳೂರು ಮಂದಿ ಬೆಚ್ಚಿಬಿದ್ದಿದ್ದಾರೆ. ಈ ಬೆನ್ನಲ್ಲೇ ಜಿಲ್ಲೆಯಾದ್ಯಂತ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.  ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.  ಆಗಸ್ಟ್ 6ರ ಮಧ್ಯರಾತ್ರಿಯವರೆಗೆ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 

"ಗುಪ್ತಚರ ಇಲಾಖೆಯ ಮಾಹಿತಿ ಪ್ರಕಾರ ಮುಂದಿನ ಮೂರು ದಿನ ಕಠಿಣ ಪರಿಸ್ಥಿತಿ ಇದೆ, ಹೀಗಾಗಿ ಸಂಜೆ ಆರು ಗಂಟೆಯಿಂದ ಬೆಳಿಗ್ಗೆ ಆರು ಗಂಟೆ ತನಕ ಅಂಗಡಿ ಮುಂಗಟ್ಟು ಬಂದ್, ನಗರ ವ್ಯಾಪ್ತಿಗೂ ಬಂದ್ ಆದೇಶ ಅನ್ವಯವಾಗಲಿದೆ, ಇದು ನೈಟ್ ಕರ್ಪ್ಯೂ ಅಲ್ಲ, ಬದಲಾಗಿ ಜನ ಕಡಿಮೆ ಮಾಡಿ ಪೊಲೀಸರಿಗೆ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶ" ಎಂದು ಜಿಲ್ಲಾಧಿಕಾರಿ ಡಾ. ಕೆವಿ ರಾಜೇಂದ್ರ ಹೇಳಿದ್ದಾರೆ.

ಪ್ರವೀಣ್ ಹತ್ಯೆ ಕೇಸ್: ಆರೋಪಿಗಳ ಅರೆಸ್ಟ್ ಆದ ಮೇಲೆ ಬೆಳ್ಳಾರೆಯಲ್ಲಿ ಏನೇನಾಯ್ತು..?