May 27, 2020, 9:55 PM IST
ಬೆಂಗಳೂರು(ಮೇ 27): ಕೊರೋನಾ ವಿಚಾರದಲ್ಲಿ ಹೊರ ರಾಜ್ಯ ಹಾಗೂ ಹೊರ ದೇಶದಿಂದ ಕರ್ನಾಟಕ ಕಷ್ಟ ಅನುಭವಿಸುತ್ತಿದೆ. ಬಹುತೇಕ ಸೋಂಕು ಪ್ರಕರಣಗಳು ಅನ್ಯ ರಾಜ್ಯ, ಅನ್ಯ ದೇಶದಿಂದಲೇ ರಾಜ್ಯಕ್ಕೆ ಬರುತ್ತಿದೆ.
122 ಕೊರೋನಾ ಪ್ರಕರಣದಲ್ಲಿ 118 ಪ್ರಕರಣಗಳೂ ಬೇರೆ ರಾಜ್ಯ, ಬೇರೆ ದೇಶದಿಂದ ಬಂದಿದೆ. ಕರ್ನಾಟಕ ಮೂಲತಃ ಎಂಬ ಪ್ರಕರಣಗಳು 4 ಮಾತ್ರ. ಮಹಾರಾಷ್ಟ್ರದಿಂದ ಬಂದ 109 ಜನರಿಗೆ ಸೋಂಕು ಇರುವುದು ದೃಢವಾಗಿದೆ.
ಮಾಜಿ ನಗರಸಭಾ ಉಪಾಧ್ಯಕ್ಷೆಯನ್ನು ಕಚ್ಚಿ ಕೊಂದು ಹಾಕಿದ ಕರಡಿ, ಇಲ್ಲಿದೆ ವಿಡಿಯೋ
ದುಬೈ, ನೇಪಾಳದಿಂದ ಬಂದವರಿಗೂ ಸೋಂಕಿರುವುದು ಖಚಿತವಾಗಿದೆ. ಕೇರಳದಿಂದ ಬಂದ ಒಬ್ಬರಲ್ಲಿ ಸೋಂಕು ಇರುವುದು ದೃಢವಾಗಿದೆ. ಹೀಗೇ ಅನ್ಯ ರಾಜ್‌ಯಗಳಿಂದ ಬೆಂಗಳೂರಿಗೆ ಬಂದ ಹಲವರಲ್ಲಿ ಸೋಂಕಿರುವುದು ಖಚಿತವಾಗಿದೆ.