Dharwad: ಕೆಲಸ ಮಾಡಿದ ವೇತನ ಪಡೆಯಲು ಕೂಲಿಕಾರರ ಹರಸಾಹಸ

Dec 9, 2021, 2:38 PM IST

ಧಾರವಾಡ(ಡಿ.09):  ಕೇಂದ್ರ ಸರಕಾರ ಉದ್ಯೋಗ ಇಲ್ಲದವರಿಗೆ ಉದ್ಯೋಗ ಕೊಡಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಕೊಡುತ್ತೆ. ಆದ್ರೆ ಏನ್ ಪ್ರಯೋಜನ ಹೇಳಿ? ಕಳೆದ ಮೂರು ತಿಂಗಳಿಂದ ಕೆಲಸ ಮಾಡಿದ ಕೂಲಿಕಾರರಿಗೆ ಮೂರು ತಿಂಗಳ ಕೂಲಿ ಹಣವನ್ನ ಜಿಲ್ಲಾ ಪಂಚಾಯತ್ ಪೆಂಡಿಂಗ್ ಉಳಿಸಿಕ್ಕೊಂಡಿದೆ!

ಹೌದು, ಧಾರವಾಡ ಜಿಲ್ಲಾ ಪಂಚಾಯತ್‌ನಿಂದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಧಾರವಾಡ ತಾಲೂಕಿನ ಗುಳೆದಕೊಪ್ಪ ಗ್ರಾಮ ಸೇರಿದಂತೆ ಬೇರೆ ಬೇರೆ ಗ್ರಾಮಗಳಲ್ಲಿ ಉದ್ಯೂಗ ಖಾತ್ರಿ ಯೋಜನೆಯಲ್ಲಿ ಗ್ರಾಮ ಪಂಚಾಯತಿ ಯಿಂದ ಕೆಲಸವನ್ನ ಮಾಡಿಸಿದ್ದಾರೆ. ಆದರೆ ಕಳೆದ ಮೂರು ತಿಂಗಳಿಂದ 1 ಕೋಟಿ 65 ಲಕ್ಷ ಹಣ ಕೂಲಿಕಾರರಿಗೆ ಕೊಡಬೇಕಾಗಿದೆ. ಆದರೆ ಸದ್ಯ ಜಿಲ್ಲಾ ಪಂಚಾಯತ್ ಎದುರು ಕೂಲಿಕಾರರು ಪ್ರತಿಭಟನೆ ಮಾಡಿ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ. ಇನ್ನು ಸರಕಾರಿ ಎಲ್ಲ ಅಧಿಕಾರಿಗಳ ಲಕ್ಷ ಲಕ್ಷ ವೇತನ ನೀಡಲು ದುಡ್ಡಿರುತ್ತೆ, ಕೂಲಿಕಾರರಿಗೆ ಹಣ ನೀಡಲೂ ಇವರಿಗೆ ಹಣ ಇರಲ್ಲ. ಜಿಲ್ಲಾ ಪಂಚಾಯತಿ ಅಧಿಕಾರಿಗಳು ಒಂದು ವಾರದಲ್ಲಿ ವೇತನ ಕೊಡದೆ ಇದ್ರೆ ಜಿಲ್ಲಾ ಪಂಚಾಯತ ಕಚೇರಿಗೆ ಬೀಗ ಹಾಕೋದಾಗಿ ಕೂಲಿಕಾರರು ಎಚ್ಚರಿಕೆಯನ್ನ ನೀಡಿದ್ದಾರೆ.

Gadag: ರಾತ್ರೋ ರಾತ್ರಿ ಬಾಳೆಗಿಡ ಕೊಚ್ಚಿ ಹಾಕಿದ ದುಷ್ಕರ್ಮಿಗಳು: ಸಂಕಷ್ಟದಲ್ಲಿ ಅನ್ನದಾತ

ಇನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯದರ್ಶಿಯವರನ್ನ ಕೇಳಿದರೆ ನಾವೇನ್ ಮಾಡೋದು ಸರ್? ಕೇಂದ್ರ ಸರಕಾರದಿಂದ ಹಣ ಬಿಡುಗಡೆಯಾಗಬೇಕು ಅವಾಗ ನಾವು ಕೂಲಿಕಾರರಿಗೆ ವೇತನವನ್ನ ಕೊಡುತ್ತೆವೆ ಅಂತಾರೆ. ಇನ್ನು ಒಂದು ಕೊಟಿ 65 ಲಕ್ಷ ಹಣ ಕೂಲಿಕಾರರದ್ದು, 20 ಕೋಟಿ ಮೆಟಿರಿಯಲ್‌ದು, ಮೂರು ತಿಂಗಳಿಂದ ಬಾಕಿ ಇದೆ. ಕೇಂದ್ರದಿಂದ ಹಣ ಬಿಡುಗಡೆಯಾದ್ರೆ ನಾವು ವೇತನವನ್ನ‌ ಕೊಡುತ್ತೆವೆ. ಆದರೆ ಕಳೆದ ಮೂರು ತಿಂಗಳಿಂದ ಎನ್‌ಆರ್‌ಜಿ ದು ಬರೊಬ್ಬರಿ 22 ಕೋಟಿಗೂ ಅಧಿಕ‌ ಹಣ ಬಾಕಿ ಇದೆ. ನಾವೂ ಕೂಡಾ ಸರಕಾರಕ್ಕೆ ಮನವಿ‌ ಸಲ್ಲಿಸಿದ್ದೇವೆ ಅಂತ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ರೇಖಾ ಡೊಳ್ಳಿನ ತಿಳಿಸಿದ್ದಾರೆ.