May 28, 2020, 6:26 PM IST
ಮಂಡ್ಯ(ಮೇ.28): ಮನೆಗೂ ಕಳಿಸ್ತಾ ಇಲ್ಲ, ವರದಿ ಏನಾಯ್ತು ಅಂತಾನೂ ಹೇಳ್ತಾಯಿಲ್ಲ. ಮಂಡ್ಯದಲ್ಲಿ ಕ್ವಾರಂಟೈನ್ ಕಥೆ ಹೇಳೋದೆ ಬೇಡ ಎನ್ನುವಂತಾಗಿದೆ.
20 ದಿನಗಳ ಕಾಲ ಕ್ವಾರಂಟೈನ್ ಅವಧಿ ಮುಗಿಸಿದ್ದರೂ ಕೂಡಾ, ಅವರನ್ನೆಲ್ಲ ಮನೆಗೆ ಕಳಿಸುತ್ತಿಲ್ಲ. ಮುಂಬೈನಿಂದ ಬಂದಂತಹ 50ಕ್ಕೂ ಹೆಚ್ಚು ಕಾರ್ಮಿಕರು ಮಂಡ್ಯದ ಕ್ವಾರಂಟೈನ್‌ನಲ್ಲಿ ಪರದಾಡುತ್ತಿದ್ದಾರೆ.
ಕ್ವಾರಂಟೈನ್ ವಿಚಾರದಲ್ಲೂ ಕಾಂಚಣದ ಸದ್ದು; ಅನುಮಾನ ಮೂಡಿಸಿದೆ ಕೈ ಶಾಸಕನ ಆಡಿಯೋ?
ವೈದ್ಯರು ಸುಮ್ಮನೆ ಬಂದು ಚೆಕಪ್ ಮಾಡಿ ಹೋಗ್ತಾರೆ. ವರದಿ ಏನಾಯ್ತು ಅಂತ ಮಾತ್ರ ಹೇಳ್ತಿಲ್ಲ ಎಂದು ಗೋಳು ಹೊಯ್ದುಕೊಳ್ಳುತ್ತಿದ್ದಾರೆ ಎನ್ನುವುದು ಕ್ವಾರಂಟೈನ್‌ನಲ್ಲಿರುವ ಜನರ ಆರೋಪ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.