Jul 15, 2021, 4:04 PM IST
ಮಂಗಳೂರು (ಜು.15): ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನರು ಆಸ್ಪತ್ರೆಗೆ ತೆರಳಲು ಪರದಾಡುವ ಸ್ಥಿತಿ ಇಲ್ಲಿ ಇದೆ.
ಮಂಗಳೂರಿನಲ್ಲಿ ಭಾರೀ ಮಳೆ : ಅರಬ್ಬೀ ಸಮುದ್ರ ಪ್ರಕ್ಷುಬ್ಧ
ಮಳೆ ಹಿನ್ನೆಲೆ ಹಳ್ಳ ತುಂಬಿ ಹರಿಯುತ್ತಿದ್ದು ಸೇತುವೆ ಇಲ್ಲದೆ ಕಾಲು ಮುರಿದ ಮಹಿಳೆಯನ್ನು ಸ್ಟ್ರೆಚರ್‌ನಲ್ಲಿ ಹೊಳೆಯಲ್ಲಿ ಹೊತ್ತು ಸಾಗಿಸಿದ ಘಟನೆ ಮಂಗಳೂರಿನ ಸುಳ್ಯ ತಾಲೂಕಿನ ಮರ್ಸಂಕ ಬಳಿ ನಡೆದಿದೆ. ಸಚಿವ ಅಂಗಾರ ಕ್ಷೇತ್ರದಲ್ಲಿ ಈ ಮನಕಲುಕುವ ಘಟನೆಯಾಗಿದೆ.