ಚಿಕ್ಕಬಳ್ಳಾಪುರ(ಏ.15): ಕೊರೋನಾ ವೈರಸ್ ಸೋಂಕು ಕಾಣಿಸಿಕೊಂಡ ನಂತರ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳ ಬೇಡಿಕೆ ಹೆಚ್ಚಾಗಿದೆ. ಚಿಕ್ಕಬಳ್ಳಾಪುರದ ಮಹಿಳಾ ಸ್ವಸಹಾಯ ಸಂಘವೊಂದು ಮಾಸ್ಕ್ ತಯಾರಿಕೆಯಲ್ಲಿ ತೊಡಗಿದೆ.
ಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ತರಬೇತಿ ಪಡೆದು ಈಗ ಮಾಸ್ಕ್ ತಯಾರಿಸುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಇವರಿಗೆ ವಿಶೇಷ ತರಬೇತಿ ನೀಡಿ ಮಾಸ್ಕ್ ಹೊಲಿಸಲು ನೆರವಾಗಿದೆ. ಇದೀಗ ಉದ್ಯೋಗವೂ ಸೃಷ್ಟಿಯಾಗಿದ್ದು, ಜನರಿಗೆ ಬೇಡಿಕೆ ತಕ್ಕಂತೆ ಮಾಸ್ಕ್ ಪೋರೈಕೆಯಾಗುತ್ತಿದೆ.
ಲಾಕ್‌ಡೌನ್: ದಿವ್ಯಾಂಗ ಮಗನ ಸಾಕಲಾಗದೆ ನಿಸ್ಸಹಾಯಕರಾಗಿ ಅಳ್ತಿದ್ದಾರೆ ಈ ಅಮ್ಮ
ಮಹಿಳಾ ಗುಂಪುಗಳು ಒಟ್ಟಾಗಿ ಸತತವಾಗಿ ಮಾಸ್ಕ್ ತಯಾರಿಕೆಯಲ್ಲಿ ತೊಡಗಿದ್ದಾರೆ. ಒಂದೊಂದು ಗುಂಪಿನಿಂದ ಸುಮಾರು 10 ಸಾವಿರದಷ್ಟು ಮಾಸ್ಕ್ ತಯಾರಿಸಲಾಗುತ್ತಿದೆ.