May 25, 2020, 5:30 PM IST
ಮಂಡ್ಯ(ಮೇ.25): ಮುಂಬೈ ಮೂಲದ ಸೋಂಕಿತರಿಂದಾಗಿ ತಬ್ಬಿಬ್ಬುಗೊಂಡಿದ್ದ ಮಂಡ್ಯ ಪಾಲಿಗೆ ಸೋಮವಾರವಾದ ಇಂದು ಕೊಂಚ ರಿಲೀಫ್ ಸಿಕ್ಕಂತೆ ಆಗಿದೆ. ಇಂದು ಕೇವಲ 2 ಕೋವಿಡ್ 19 ಪ್ರಕರಣಗಳು ಮಾತ್ರ ಪತ್ತೆಯಾಗಿವೆ.
ಇದೀಗ ಮಂಡ್ಯದಲ್ಲಿ ಮುಂಬೈನಿಂದ ಬಂದಂತಹ ಇಬ್ಬರಿಗೆ ಮಾತ್ರ ಕೊರೋನಾ ಸೋಂಕು ಪತ್ತೆಯಾಗಿದೆ. 14 ವರ್ಷದ ಬಾಲಕ ಹಾಗೂ 65 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ವಕ್ಕರಿಸಿದೆ.
ಮಂಡ್ಯದಲ್ಲಿ 10 ಕ್ಕೂ ಹೆಚ್ಚು ಜನರಿಗೆ ವೈರಸ್ ಅಂಟಿಸಿದ ಮುಂಬೈ ವಲಸಿಗ
ಸದ್ಯ ಮಂಡ್ಯದಲ್ಲಿ ಕೊರೋನಾ ಪೀಡಿತರ ಸಂಖ್ಯೆ 250ರ ಗಡಿ ದಾಟಿದೆ. ಆದರೆ ಸೋಮವಾರ ಬೆಳಗ್ಗಿನ ಬುಲೆಟಿನ್ ಅನ್ವಯ ಕೇವಲ ಇಬ್ಬರಿಗಷ್ಟೇ ಸೋಂಕು ದೃಢಪಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.