Sep 16, 2021, 11:43 AM IST
ಶಿವಮೊಗ್ಗ (ಸೆ.16): ಅಂತರ್ಜಾತಿ ವಿವಾಹಕ್ಕೆ ಪೋಷಕರು ಅಡ್ಡಿ ಪಡಿಸಿದ ಹಿನ್ನೆಲೆ ಪ್ರೇಮಿಗಳಿಬ್ಬರು ಮನೆ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಮನೆಯಲ್ಲಿ ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಬ್ಬರು ಪರಾರಿಯಾಗಿದ್ದು ಇಬ್ಬರ ವಿಡಿಯೊ ವೈರಲ್ ಆಗಿದೆ.
ಶಿವಮೊಗ್ಗ; ಮೈಸೂರಿನಲ್ಲಿದ್ದ ಆಕೆ ಮದುವೆಗೆ ಮುನ್ನ ಗರ್ಭಿಣಿ.. ಮಗುವಿನ ತಂದೆ ನಿಗೂಢ!
ಶಿವಮೊಗ್ಗದ ಯುವಕ ಹಾಗೂ ಯುವತಿ ಮನೆಯಿಂದ ಪರಾರಿಯಾಗಿದ್ದು, ಜಾತಿ ರಾಜಕೀಯದಿಂದ ನಮ್ಮನ್ನು ದೂರ ಮಾಡುತ್ತಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ಮೊದಲ ಬಾರಿ ಎಸ್ಕೇಪ್ ಆದಾಗ ಸಂಧಾನ ಮಾಡಿ ಕರೆಸಿಕೊಳ್ಳಲಾಗಿದ್ದು ಮತ್ತೆ ವಿರೋಧ ಹಿನ್ನೆಲೆ ಎಸ್ಕೇಪ್ ಆಗಿದ್ದಾರೆ.