May 14, 2020, 12:11 PM IST
ಬೆಂಗಳೂರು(ಮೇ.14): ಕರ್ನಾಟಕದ ಪಾಲಿಗೆ ಕಳೆದೊಂದು ವಾರ ಶಾಪವಾಗಿ ಪರಿಣಸಿದೆ. ಇಂದೂ ಕೂಡ ಕೊರೋನಾ ಸುನಾಮಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸ್ವಲ್ಪ ಯಾಮಾರಿದ್ರೂ ಅಪಾಯ ಪಕ್ಕಾ ಆಗಿದೆ.
ದೇಶದಲ್ಲಿ 78 ಸಾವಿರದ ಗಡಿ ದಾಟಿದ ಕೊರೋನಾ ರಕ್ಕಸ..!
ಹೌದು, ಕಳೆದೊಂದು ವಾರದಲ್ಲಿ ರಾಜ್ಯದಲ್ಲಿ ಬರೋಬ್ಬರಿ 206 ಮಂದಿಗೆ ಕೊರೋನಾ ವೈರಸ್ ಅಂಟಿದೆ. ಇದರಿಂದ ಜನರು ಭಯದಲ್ಲೇ ಜೀವನ ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರೀನ್ ಝೋನ್ ಇದ್ದ ಜಿಲ್ಲೆಯಗಳಲ್ಲೂ ಕೊರೋನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಒಂದು ವಾರದಲ್ಲಿ ನಾಲ್ಕು ಹಸಿರು ವಲಯ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.