Kodagu: ಪ್ರತಿಭಟನೆ ವೇಳೇ ಊಟವಿಲ್ಲ, ಹಲಸಿನ ಕಾಯಿ ತಿಂದು ಹೊಟ್ಟೆತುಂಬಿಸಿಕೊಂಡ ಹೋರಾಟಗಾರರು

May 16, 2022, 10:36 AM IST

ಮಡಿಕೇರಿ (ಮೇ. 16):  ಪೊನ್ನಂಪೇಟೆ ತಾಲೂಕಿನ ಆಡುಗುಂಡಿ ಹಾಡಿಯಲ್ಲಿ ಆದಿವಾಸಿಗಳ ಅಹೋರಾತ್ರಿ ಪ್ರತಿಭಟನೆ 8ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾಕಾರರು ಊಟವಿಲ್ಲದೆ ಹಲಸಿನ ಕಾಯಿ ತಿಂದು ಹೊಟ್ಟೆತುಂಬಿಸಿಕೊಳ್ಳುತ್ತಿದ್ದಾರೆ.

ಮಾನವೀಯತೆ ಮೆರೆದ ಶಿವಮೊಗ್ಗ ಪೊಲೀಸ್ ಪೇದೆ: ವಿಡಿಯೋ ವೈರಲ್

ಮೈಸೂರು ಜಿಲ್ಲೆಯ ಎಚ್‌.ಡಿ. ಕೋಟೆಯ ಮಾಸ್ತಿಗುಡಿ, ನಾಗಪುರ ಪುನರ್ವಸತಿ ಕೇಂದ್ರಗಳಿಂದ ಕೊಡಗಿಗೆ ವಾಪಸ್‌ ಆಗಿರುವ ಆದಿವಾಸಿಗಳು ಆರ್‌ಟಿಸಿ ಹಾಗೂ ಮೂಲಸೌಕರ್ಯ ಒದಗಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆರು ದಿನಗಳಿಂದ ರಸ್ತೆ ಬದಿಯ ಪ್ರತಿಭಟಿಸುತ್ತಿರುವ ನೂರಕ್ಕೂ ಹೆಚ್ಚು ಕುಟುಂಬಗಳು ತಿನ್ನಲು ಊಟವಿಲ್ಲದೆ ಹಲಸಿನ ಕಾಯಿ ತಿಂದು ಹೊಟ್ಟೆತುಂಬಿಸಿಕೊಳ್ಳುತ್ತಿದ್ದಾರೆ.

ಪುನರ್ವಸತಿ ಕೇಂದ್ರದಲ್ಲಿ ಮೂಲಸೌಲಭ್ಯ ನೀಡದ ಹಿನ್ನೆಲೆಯಲ್ಲಿ ಆದಿವಾಸಿಗಳು ಜಿಲ್ಲೆಗೆ ಹಿಂತಿರುಗಿ ಪ್ರತಿಭಟನೆ ನಡೆಸುತ್ತಿದ್ದು, ನ್ಯಾಯ ಸಿಗುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.