Jul 29, 2021, 7:25 PM IST
ಬೆಳಗಾವಿ/ಅಥಣಿ(ಜು. 29) ಮಳೆ ಕಡಿಮೆಯಾಗಿದ್ದರೂ ಪ್ರವಾಹ ಇಳಿದಿಲ್ಲ. ಅದರ ಜತೆಗೆ ಬಂದ ಸಂಕಷ್ಟಗಳು ಕೊನೆಯಾಗಿಲ್ಲ. ಪ್ರವಾಹದ ಹೊಡೆತಕ್ಕೆ ಬಸ್ ನಿಲ್ದಾಣಕ್ಕೆ ಬದುಕು ಬಂದು ನಿಂತಿದೆ. ಪ್ರವಾಹದಿಂದ ಬದುಕು ಕಳೆದುಕೊಂಡ ಅಜ್ಜಿಯ ಕರುಣಾಜನಕ ಕಥೆ ಇದು.
ಧಾರಾಕಾರ ಮಳೆಗೆ ಕೊಚ್ಚಿ ಹೋದ ಬೆಳಗಾವಿ
ಚಳಿಯಾಗ್ತಿದೆ, ಮುಂದೆ ಏನು ಮಾಡಬೇಕು ಎನ್ನುವುದು ತೋಚದಾಗಿದೆ ಎನ್ನುವ ಅಜ್ಜಿಗೆ ಸತ್ತಿ ಗ್ರಾಮದ ಬಳಿಯ ಜೀರೋ ಪಾಯಿಂಟ್ ಬಸ್ ನಿಲ್ದಾಣವೇ ಮನೆಯಾಗಿದೆ. ಕಾಳು-ಕಡಿ ಎಮ್ಮೆ, ದನ ಕರುಗಳ ಸಮೇತ ಬಸ್ ನಿಲ್ದಾಣದಲ್ಲೆ ವೃದ್ಧೆ ವಾಸಮಾಡುತ್ತಿದ್ದಾರೆ. ತಾಲೂಕು ಆಡಳಿತದ ಮೇಲೆ ಅಜ್ಜಿ ಹಿಡಿಶಾಪ ಹಾಕಿದ್ದಾರೆ.