Jan 19, 2022, 11:48 AM IST
ದಾವಣಗೆರೆ (ಜ. 19): ಜಗಳೂರಿನಲ್ಲಿ (Jagalur) ರಾತ್ರೋರಾತ್ರಿ ಏತ ನೀರಾವರಿ (Irrigation Project) ನಕ್ಷೆಯೇ ಬದಲಾಗಿದೆ. ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿ ಆದೇಶ ಬರುವ ಮುಂಚೆಯೇ ಜಿಲ್ಲಾಡಳಿತ ಹೊಲ ಹಾಗೂ ಸೈಟ್‌ಗಳಲ್ಲಿ ಪೈಪ್ ಅಳವಡಿಸಿದೆ ಎಂದು ರೈತರು ಆರೋಪಿಸಿದ್ದಾರೆ. ಜಗಳೂರಿನ 53 ಕೆರೆಗಳ ಏತ ನೀರಾವರಿ ಯೋಜನೆಗೆ ರೈತರಿಗೆ ಪರಿಹಾರ ನೀಡದೆ ಪೈಪ್‌ಲೈನ್ ಕಾಮಗಾರಿ (Pipeline Work) ಆರಂಭ ಮಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬೆನ್ನಲ್ಲೇ ಕಕ್ಕರಗೊಳ್ಳ ರೈತರು ಮತ್ತು ಅಧಿಕಾರಗಳ ಮಧ್ಯೆ ವಾಗ್ವಾದ ನಡೆದಿದೆ.
ಇದನ್ನೂ ಓದಿ: Irrigation Project: 'ಕೊಪ್ಪಳ ಏತ ನೀರಾವರಿ ಯೋಜನೆ ಸಿದ್ದರಾಮಯ್ಯ ಕೊಡುಗೆ'
ಪರಿಹಾರ ನೀಡುವಲ್ಲಿ ಜಿಲ್ಲಾಡಳಿತದಿಂದ ತಾರತಮ್ಯವಾಗಿದೆ. ರೈತರೊಂದಿಗೆ ಒಪ್ಪಂದ ಮಾಡಿಕೊಳ್ಳದೆ ಜಿಲ್ಲಾಡಳಿತ ಕಾಮಗಾರಿ ಮಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. "ಪೋಲಿಸ್ ಫೊರ್ಸ್ (Police Force) ಬಳಸಿ ಹೊಲಗಳಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಸರ್ಕಾರದಿಂದ ಅನುಮೋದನೆಗೊಂಡ ನಕ್ಷೆ ಬೇರೆ ಕಡೆ ಇದೆ. ಆದರೆ ಪ್ರಭಾವಿ ವ್ಯಕ್ತಿಗಳು ತಮ್ಮ ಹೊಲದಲ್ಲಿ ಪೈಪ್‌ಲೈನ್ ಹಾದುಹೋಗದಂತೆ ನಕ್ಷೆ ಬದಲಾಯಿಸುವಂತೆ ಮಾಡಿದ್ದಾರೆ" ಎಂದು ಕಕ್ಕರಗೊಳ್ಳ ರೈತರು ಹೇಳಿದ್ದಾರೆ.