ಬೆಂಗಳೂರು: ಸರ್ಕಾರದಿಂದಲೇ ಚಾಮರಾಜಪೇಟೆ ಈದ್ಗಾದಲ್ಲಿ ಕನ್ನಡ ರಾಜ್ಯೋತ್ಸವ?

Oct 30, 2022, 1:02 PM IST

ಬೆಂಗಳೂರು(ಅ.30):  ರಾಜ್ಯದಲ್ಲಿ ಮತ್ತೆ ಸುದ್ದಿಯಾಗುತ್ತಿದೆ ಈದ್ಗಾ ದಂಗಲ್‌. ಹೌದು, ಬೆಂಗಳೂರಿನ ಚಾಮರಾಜಪೇಟೆ ಈದ್ಗಾದಲ್ಲಿ ಕನ್ನಡ ರಾಜ್ಯೋತ್ಸವ ದಂಗಲ್‌ ಶುರುವಾಗಿದೆ. ವಿವಾದಿತ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ನಡೆಯುತ್ತಾ? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ಈ ಕುರಿತಂತೆ ಭಾರೀ ಚರ್ಚೆಗಳು ನಡೆಯುತ್ತಿವೆ. ಮೈದಾನದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಸುಪ್ರೀಂ ಆದೇಶ ಇರೋ ಕಾರಣ ಈದ್ಗಾದಲ್ಲಿ ಕನ್ನಡ ರಾಜ್ಯೋತ್ಸವ ಕಷ್ಟ ಸಾಧ್ಯ. ಸುಪ್ರೀಂಕೋರ್ಟ್‌ ಆದೇಶವನ್ನ ಉಲ್ಲಂಘಿಸಿದರೆ ಸುಪ್ರೀಂ ಮತ್ತೆ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೂಡ ಇಕ್ಕಟ್ಟಿನಲ್ಲಿ ಸಿಲುಕಿದೆ. 

ಪಿಎಫ್ಐ ಕರ್ಮಕಾಂಡ: ವಿಧ್ವಂಸಕ ಕೃತ್ಯಕ್ಕೆ 45 ಸಾವಿರ ಯುವಕರಿಗೆ ತರಬೇತಿ?