Nov 25, 2021, 11:58 AM IST
ಕೊಡಗು(Kodagu) ಜಿಲ್ಲೆಯಲ್ಲಿ ಕಳೆದ ಎರಡು ದಿನಳಿಂದ ಹುತ್ತರಿ ಹಬ್ಬದ(Huthari Festival) ಸಂಭ್ರಮ ಮನೆ ಮಾಡಿದೆ.ಅದರಲ್ಲೂ ಮಡಿಕೇರಿಯ(Madikeri) ರಾಜರ ಕೋಟೆ ಆವರಣದಲ್ಲಿ ನಡೆದ ಹುತ್ತರಿ ಕೋಲಾಟ ಗತಕಾಲದ ವೈಭವವನ್ನು ನೆನೆಪಿಸುವಂತಿತ್ತು.ದಟ್ಟಿ ಕುಪ್ಪಸ ತೊಟ್ಟ ಪುರುಷರು ಕೈಯಲ್ಲಿ ಪಾತುರೆ ಕೋಲು ಹಿಡಿದು ನೃತ್ಯ ಮಾಡಿ ಸಂಭ್ರಮಿಸಿದರೆ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ನೃತ್ಯ(Dance) ಮಾಡಿ ವಿಜೃಂಭಿಸಿದರು.
Kodava Heritage Center : 5 ವರ್ಷವಾದರೂ ಮುಗಿಯದ ಹೆರಿಟೇಜ್ ಸೆಂಟರ್ ನೆನೆಗುದಿಗೆ
ಕೊಡಗು ಜಿಲ್ಲೆಯಾದ್ಯಂತ ಹುತ್ತರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಅದರಲ್ಲೂ ವಿಶೇಷವಾಗಿ ಮಡಿಕೇರಿ ಅರಮನೆ ಆವರಣದಲ್ಲಿ ನಡೆದ ಹುತ್ತರಿ ಕೋಲಾಟ ಜನಮನ ರಂಜಿಸಿದೆ. ಪ್ರತೀ ವರ್ಷದಂತೆ ಈ ಬಾರಿಯೂ ಕೂಡ ಮಡಿಕೇರಿಯ ಕೋಟೆ ಆವರಣದಲ್ಲಿ ಹುತ್ತರಿ ಕೋಲಾಟ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ಪುರಾತನ ಕಾಲದಿಂದಲೂ ಪಾಂಡಿರ ಕುಟುಂಬಸ್ಥರು ಅರಮನೆ ಆವರಣದಲ್ಲಿ ಹುತ್ತರಿ ಕೋಲಾಟ ನಡೆಸುತ್ತಿದ್ದರು. ಆದರೆ ಹಲವು ವರ್ಷಗಳು ಈ ಕಾರ್ಯಕ್ರಮ ಕಾರಣಾಂತರದಿಂದ ರದ್ದಾಗಿತ್ತು. ಆದರೆ ಕಳೆದ ಎಂಟು ವರ್ಷಗಳಿಂದ ಮತ್ತೆ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಮೂಲಕ ರಾಜರ ಅರಮನೆಯ ಗತಕಾಲದ ವೈಭವವನ್ನು ಮತ್ತೆ ನೆನೆಪಿಸುವಂತೆ ಮಾಡುತ್ತಿದೆ. ಓಂಕಾರೇಶ್ವರ ದೇವಾಲಯ ಸಮಿತಿ ಹಾಗೂ ಜಿಲ್ಲಾಡಳಿತದಿಂದ ಈ ಹುತ್ತರಿ ಕೋಲಾಟ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.