ಮೈಸೂರಿನಲ್ಲಿ ಕೊರೊನಾ ವಾರಿಯರ್ಸ್‌ಗೆ ಹೂಮಳೆಗೈದು ಗೌರವ ಸಲ್ಲಿಸಿದ ಜನತೆ

May 15, 2020, 12:13 PM IST

ಮೈಸೂರು (ಮೇ. 15): ಜಿಲ್ಲೆಯಲ್ಲಿ ಕಳೆದ 14 ದಿನಗಳಿಂದ ಯಾವುದೇ ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿಲ್ಲ. ಜಿಲ್ಲೆಯನ್ನು ಇನ್ನಿಲ್ಲದಂತೆ ಕಾಡಿದ್ದ ನಂಜನಗೂಡಿನ ಫಾರ್ಮಾ ಕಂಪನಿಯಲ್ಲೂ ಯಾವುದೇ ಹೊಸ ಪ್ರಕರಣಗಳು ಕಂಡುಬರುತ್ತಿಲ್ಲ. ಅಲ್ಲದೆ, ಈ ವರೆಗೆ ಪತ್ತೆಯಾಗಿರುವ 88 ಪ್ರಕರಣಗಳ ಪೈಕಿ 86 ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.

14 ದಿನಗಳಿಂದ ಸೋಂಕಿಲ್ಲ: ಮೈಸೂರು ಕಿತ್ತಳೆ ವಲಯದತ್ತ

ಇನ್ನು ಇಬ್ಬರು ಸಕ್ರಿಯ ಸೋಂಕಿತರು ಮಾತ್ರವೇ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದರೆ ಜಿಲ್ಲೆ ಕೊರೋನಾ ಮುಕ್ತವಾಗಲಿದೆ. ಕೊರೊನಾ ಮುಕ್ತಿಗಾಗಿ ವಾರಿಯರ್ಸ್‌ ರೀತಿ ದುಡಿದ ವೈದ್ಯಕೀಯ ಸಿಬ್ಬಂದಿ, ಪೌರಕಾರ್ಮಿಕರು, ಪೊಲೀಸ್ ಸಿಬ್ಬಂದಿ  ಮೇಲೆ ಹೂಮಳೆಗೈದು ಗೌರವ ಸಲ್ಲಿಸಲಾಯಿತು.