ಕಿರಿಮಗನ ಕಾರಣಕ್ಕೆ ಅಪ್ಪನಿಗೆ ಜೈಲು, ಹಿರಿಮಗನಿಂದ ಮತ್ತೊಂದು ಸಂಕಷ್ಟ! ಸೂರಜ್ ರೇವಣ್ಣ ವಿರುದ್ಧ ಸಲಿಂಗಕಾಮದ ಆರೋಪ..!

Jun 23, 2024, 4:54 PM IST

ಅದು ರಾಜ್ಯ ರಾಜಕಾರಣದ ಅತ್ಯಂತ ಪವರ್ ಫುಲ್ ಪೊಲಿಟಿಕಲ್ ಫ್ಯಾಮಿಲಿ. ಆ ಕುಟುಂಬದ ಹಿರಿಮಗನ ಮನೆಯಲ್ಲಿ ಬಿರುಗಾಳಿ, ಸುಂಟರಗಾಳಿ, ಸುನಾಮಿ. ಮೊದಲು ಒಬ್ಬ ಮಗನ ಪೆನ್‌ಡ್ರೈವ್ ವಿಡಿಯೋ ಅವಾಂತರ, ಈಗ ಮತ್ತೊಬ್ಬ ಮಗನ ವಿರುದ್ಧವೂ ಲೈಂಗಿಕ ದೌರ್ಜನ್ಯ ಪ್ರಕರಣ (Homosexuality Sexual Assault Case). ಇಲ್ಲಿ ಪ್ರಕರಣ ದಾಖಲಾಗಿರೋದು ಎಚ್.ಡಿ ರೇವಣ್ಣನವರ(HD revanna) ದೊಡ್ಡ ಮಗ ಸೂರಜ್ ರೇವಣ್ಣ (Suraj Revanna) ವಿರುದ್ಧ. ಹಾಸನ ರಾಜಕೀಯದಲ್ಲಿ ಪವರ್"ಫುಲ್ ಫ್ಯಾಮಿಲಿ ಯಾವುದು ಅಂತ ಕೇಳಿದ್ರೆ, ಎಲ್ಲರೂ ಹೊಳೆನರಸೀಪುರದ ಆ ಮನೆಯತ್ತ ಕೈ ತೋರಿಸ್ತಾರೆ. ದಶಕಗಳಿಂದ್ಲೂ ಹಾಸನ ಸಿಂಹಾಸನದ ಮೇಲೆ ಕೂತು ಜಿಲ್ಲೆಯಲ್ಲಿ ಅಧಿಪತ್ಯ ಸಾಧಿಸಿದ್ದ ಕುಟುಂಬ ಅದು. ಆ ಮನೆಯ ಯಜಮಾನ 6 ಬಾರಿ ಎಂಎಲ್ಎ, ಮೂರು ಬಾರಿ ಮಂತ್ರಿ. ಮನೆಯ ಯಜಮಾನನ ಪತ್ನಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ. ಹಿರಿಮಗ ಎಂಎಲ್‌ಸಿ, ಕಿರಿಮಗ ಮಾಜಿ ಸಂಸದ. ಅಧಿಕಾರ ಇದೆ, ಐಶ್ವರ್ಯ-ಅಂತಸ್ತು ಇದೆ. ಕೈಗೊಬ್ಬ ಕಾಲಿಗೊಬ್ಬ ಆಳು. ಆದ್ರೇನು ಬಂತು. ಆ ಮನೆಯಲ್ಲೀಗ ಸ್ಮಶಾನ ಮೌನ. ಅರ್ಥಾತ್ ಮನೆ ಖಾಲಿ ಖಾಲಿ. ಕಾರಣ, ಆ ಮನೆಗೆ ಹೊಡೆದಿರೋ ಸನ್'ಸ್ಟ್ರೋಕ್. ಮಾಜಿ ಸಚಿವ ಎಚ್.ಡಿ ರೇವಣ್ಣನವರ ಕಿರಿಮಗ, ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಈಗ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ. ಈತನ ವಿರುದ್ಧ ಕೇಳಿ ಬಂದಿರೋ ಆರೋಪ ಅಂತಿಂಥದ್ದಲ್ಲ. ದಾಖಲಾಗಿರೋ ಪ್ರಕರಣಗಳು ಒಂದೆಡರಲ್ಲ. ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಮೂರು ಮೂರು ಕೇಸ್‌ಗಳು ಪ್ರಜ್ವಲ್ ರೇವಣ್ಣ ಮೇಲೆ ದಾಖಲಾಗಿವೆ. ಪ್ರಕರಣದಲ್ಲಿ ಅರೆಸ್ಟ್ ಆಗಿರೋ ಪ್ರಜ್ವಲ್, ಬೆಂಗಳೂರಿನ ಸೆಂಟ್ರಲ್ ಜೈಲು ಸೇರಿದ್ದಾನೆ. ಒಬ್ಬ ಮಗನ ಲೀಲೆಗಳು ಹಾದಿ ಬೀದಿಯಲ್ಲಿ ಹರಾಜಾಗಿರೋ ಮಧ್ಯೆ, ಈಗ ಮತ್ತೊಬ್ಬ ಮಗನ ಸಾಹಸಗಾಥೆಯ ಅಧ್ಯಾಯವೊಂದು ತೆರೆದುಕೊಂಡಿದೆ. 

ಇದನ್ನೂ ವೀಕ್ಷಿಸಿ:  ರೇಣುಕಾಸ್ವಾಮಿ ಕೊಲೆ ಪ್ರಕರಣ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಹಿಳಾ ಸಿಬ್ಬಂದಿ ಜೊತೆ ಪವಿತ್ರಾ ಗೌಡ ಕಿರಿಕ್