ಬಾಗಲಕೋಟೆ: ಇತಿಹಾಸ ಸೃಷ್ಠಿಸಿದ ದೇವರ ಕಾಯಿ..!

Sep 10, 2021, 11:02 AM IST

ಬಾಗಲಕೋಟೆ(ಸೆ.10): ದೇವರ ಗದ್ದುಗೆ ಮೇಲಿನ ಕೇವಲ ಒಂದು ಕಾಯಿ ರೂ. 6,50,000ಕ್ಕೆ ಹರಾಜಾದ ಘಟನೆ ಜಿಲ್ಲೆಯ ಚಿಕ್ಕಲಕಿ ಗ್ರಾಮದ ಜಾತ್ರೆಯಲ್ಲಿ ನಡೆದಿದೆ. ಬೀರಲಿಂಗೇಶ್ವರ ಜಾತ್ರೆ ನಿಮಿತ್ತ ಶ್ರಾವಣ ಮಾಸದ ಬಳಿಕ ನಡೆಯುವ ಕಾಯಿ ಸವಾಲ್‌ನಲ್ಲಿ ಒಂದು ಕಾಯಿ ರೂ. 6,50,000ಕ್ಕೆ ಹರಾಜಾಗಿದೆ. ಕೋವಿಡ್ ಹಿನ್ನಲೆ ಸರಳ ಜಾತ್ರೆ ಮಧ್ಯೆ ಅತಿ ಹೆಚ್ಚಿನ ಮೊತ್ತಕ್ಕೆ ಕಾಯಿ ಸವಾಲ್‌ ಆಗಿದೆ. ತಿಕೋಟಾ ಮೂಲದ ಮಹಾವೀರ ಎಂಬುವವರು ಸವಾಲ್‌ನಲ್ಲಿ ರೂ. 6,50,000 ಕೊಟ್ಟು ಕಾಯಿಯನ್ನ ಪಡೆದಿದ್ದಾರೆ. ಒಂದು ತಿಂಗಳ ಪರ್ಯಂತ ಪೂಜೆ ಮಾಡಿದ ಕಾಯಿಯಾಗಿರೋ ಹಿನ್ನೆಲೆಯಲ್ಲಿ ಭಕ್ತರಿಂದ ಅಪಾರ ಬೇಡಿಕೆ ವ್ಯಕ್ತವಾಗಿದೆ.  

ಸಕಲ ಸೌಭಾಗ್ಯವನ್ನು ಕೊಡುವ ಸ್ವರ್ಣಗೌರಿ ವ್ರತವನ್ನು ಮಾಡುವುದು ಹೇಗೆ..?