ತುಕ್ಕು ಹಿಡಿಯುತ್ತಿವೆ ಸ್ಮಾರ್ಟ್ ಸಿಟಿ ಹೈಟೆಕ್ ಶಾಪ್ಸ್: ಮಳಿಗೆ ನಿರ್ಮಿಸಿ ವರ್ಷಗಳೇ ಕಳೆದ್ರೂ ಹಂಚಿಕೆಯಾಗಿಲ್ಲ !

Sep 4, 2023, 3:43 PM IST

ತುಮಕೂರು: ಸಾಲು ಸಾಲಾಗಿ ಕಾಣುತ್ತಿರುವ ಅಂಗಡಿ ಮಳಿಗೆಗಳು..ನೀರಿನ ಸಂಪರ್ಕ.. ವಿದ್ಯುತ್ ಸಂಪರ್ಕ.. ಕುಳಿತುಕೊಳ್ಳಲು ಹೈಟೆಕ್ ಆಸನದ ವ್ಯವಸ್ಥೆ. ಈ ರೀತಿ ಹೈಟೆಕ್ ಮಳಿಗೆಗಳು ಇರೋದು ತುಮಕೂರು ನಗರದಲ್ಲಿರುವ ಅಮಾನಿಕೆರೆ ಬಳಿ. ಇಂತಹ ಸುಸಜ್ಜಿತ ಅಂಗಡಿ ಮಳಿಗೆಗಳು ತುಕ್ಕು ಹಿಡಿಯುವ ಹಂತ ತಲುಪಿದೆ. ಪ್ರಧಾನಿ ಮೋದಿ(Prime Minister Modi) ಕನಸಿನ ಸ್ಮಾರ್ಟ್‌ ಯೋಜನೆಯು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಮರಿಹೋಗುತ್ತಿದೆ. ಜನೋಪಯೋಗಿಯಾಗಬೇಕಾದ ಸ್ಮಾರ್ಟಿ ಸಿಟಿ(Smarty City) ಕಾಮಗಾರಿಗಳು ತುಕ್ಕು ಹಿಡಿಯುತ್ತಿವೆ. ತುಮಕೂರಿನಲ್ಲಿ ನಿರ್ಮಾಣವಾಗಿರುವ 16 ಸ್ಮಾರ್ಟ್ ಅಂಗಡಿಗಳು ಫಲಾನುಭವಿಗಳಿಗೆ ಹಂಚಿಕೆ ಆಗದೇ ತುಕ್ಕು ಹಿಡಿಯುತ್ತಿವೆ.

ಸ್ಮಾರ್ಟ್ ಸಿಟಿ ಯೋಜನೆ  ಪ್ರಧಾನಿ ಮೋದಿಯವರ ದೊಡ್ಡ ಕನಸು. ದೇಶದ ನೂರು ನಗರಗಳನ್ನು ಸ್ಮಾರ್ಟ್ ಸಿಟಿಯಾಗಿ ಪರಿವರ್ತಿಸುವ ಪ್ರಯತ್ನವಿದು, ಈ ಸ್ಮಾರ್ಟ್ ಸಿಟಿ ಯೋಜನೆಗೆ ತುಮಕೂರನ್ನು(Tumkur) ಕೂಡ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇದಕ್ಕಾಗಿ ಒಂದು ಸಾವಿರ ಕೋಟಿ ರೂಪಾಯಿ ಅನುದಾನವನ್ನು ನೀಡಲಾಯ್ತು. ಹೀಗಾಗಿ ಕಾಮಗಾರಿಗಳು ಶರವೇಗದಲ್ಲಿ ನಡೆದವು. ಈ ಕಾಮಗಾರಿಗಳಲ್ಲಿ ಈ ಹೈಟೆಕ್ ಮಳಿಗೆಗಳು ಕೂಡ ಒಂದು. ಆದ್ರೆ 16 ಹೈಟೆಕ್ ಅಂಗಡಿ(Hightech shop) ನಿರ್ಮಾಣ ಮಾಡಿ ಹಂಚಿಕೆ ಮಾಡದೇ ಅಧಿಕಾರಿಗಳು ತುಕ್ಕು ಹಿಡಿಯುವ ಹಂತಕ್ಕೆ ತಲುಪಿಸಿದ್ದಾರೆ.

16 ಮಳಿಗೆಗಳಂತೆ  ಒಂದು ಮಳಿಗೆಯನ್ನು  2 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಅಂಗಡಿಗಳ ಮುಂದೆ ಹೈಟೆಕ್ ಆಸನ ಸೇರಿ ಇನ್ನಿತರ ಕಾಮಗಾರಿ ಸೇರಿ ಒಟ್ಟು 1 ಕೋಟಿ 4 ಲಕ್ಷದಷ್ಟು ಹಣ ಖರ್ಚು ಮಾಡಿ ನಿರ್ಮಿಸಲಾಗಿದೆ. 16 ಮಳಿಗೆಗಳನ್ನು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೀಡಲಾಗಿದ್ದು, ಹಂಚಿಕೆ ಪ್ರಕ್ರಿಯೆ ಮಾತ್ರ ಆಮೆಗತಿಯಲ್ಲಿ ಸಾಗಿದೆ.

ಇದನ್ನೂ ವೀಕ್ಷಿಸಿ:  ಆಪ್ತಮಿತ್ರರ ಮಧ್ಯೆ ಮತ್ತೆ ರಾಜಕೀಯ ವೈರತ್ವ: ಏನಿದು “ಚಾಮುಂಡಿ” ಗೆಳೆಯರ ದೋಸ್ತಿ.. ದುಷ್ಮನಿ ಕಹಾನಿ..?