ಭಾರೀ ಮಳೆಗೆ ಬೆಚ್ಚಿಬಿದ್ದ ಕಲಬುರಗಿ: ಮನಗಳಿಗೆ ನುಗ್ಗಿದ ನೀರು..!

Jul 10, 2021, 2:18 PM IST

ಕಲಬುರಗಿ(ಜು.10): ನಿನ್ನೆ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಕಲಬುರಗಿ ನಗರ ಅಕ್ಷರಶಃ ನಲುಗಿ ಹೋಗಿದೆ. ಹೌದು, ಭಾರೀ ಮಳೆಯಾದ ಪರಿಣಾಮ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಹೀಗಾಗಿ ಮನೆಯಲ್ಲಿರುವ ಪೀಠೋಪಕರಣಗಳು ನೀರು ಪಾಲಾಗಿವೆ. ನೀರು ಹೊರಹಾಕಲು ಜನರು ಹರಸಾಹಸ ಪಟ್ಟಿದ್ದಾರೆ. ವರುಣನ ಅಬ್ಬರಕ್ಕೆ ಕಲಬುರಗಿ ಜನತೆ ಬೆಚ್ಚಿ ಬಿದ್ದಿದ್ದಾರೆ. ಧಾರಾಕಾರ ಮಳೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮನೆಗಳಿಗೆ ಚರಂಡಿ ನೀರು ನುಗ್ಗಿದ ಪರಿಣಾಮ ದೊಡ್ಡ ಅವಾಂತರವೇ ಸೃಷ್ಟಿಯಾಗಿದೆ.

ಅಂಬಿ ಪತ್ನಿ ಅಂತ ಹೈಜಾಕ್ ಮಾಡಿ ಸುಮಲತಾ ಗೆದ್ದಿದ್ದಾರಷ್ಟೇ; ಶಿವರಾಮೇ ಗೌಡ ವಾಗ್ದಾಳಿ