Dec 28, 2023, 12:45 PM IST
ಕೋಲಾರ, ಬೆಂಗಳೂರು ಬಳಿಕ ಇದೀಗ ಶಿವಮೊಗ್ಗದಲ್ಲೂ(Shivamogga) ಅಮಾನವೀಯ ಕೃತ್ಯ ನಡೆದಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ(Madhu Bangarappa) ಅವರ ತವರು ಜಿಲ್ಲೆಯಲ್ಲೇ ಮಕ್ಕಳಿಂದ ಶಾಲೆಯ ಟಾಯ್ಲೆಟ್ ಕ್ಲೀನಿಂಗ್(Clean Toilet) ಮಾಡಿಸಲಾಗಿದೆ. ಗುಡ್ಡದ ನೆರಲೇಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿಗಳಿಂದ ಮುಖ್ಯ ಶಿಕ್ಷಕ ಶೌಚಾಲಯ ಕ್ಲೀನ್ ಮಾಡಿಸಿದ್ದಾರೆ. ಮಕ್ಕಳನ್ನ ದುರ್ಬಳಕೆ ಮಾಡಿದ ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಮಕ್ಕಳನ್ನು ಓದಿಸುವ ಬದಲು ಅವರ ಕೈಯಿಂದ ಈ ರೀತಿಯ ಕೆಲಸ ಮಾಡಿಸಿರುವುದು ನಿಜವಾಗ್ಲೂ ಅಮಾನವೀಯವಾಗಿದೆ. ಅಲ್ಲದೇ ಶಿಕ್ಷಕರ ವಿರುದ್ಧ ದಲಿತ ಸಂಘರ್ಷ ಸಮಿತಿಯಿಂದ ದೂರು ನೀಡಲಾಗಿದೆ.
ಇದನ್ನೂ ವೀಕ್ಷಿಸಿ: ಅಪ್ಪ-ಅಮ್ಮ, ಪೂರ್ವಜರು ಮಾಡಿದ ಪುಣ್ಯದಿಂದ ಅಯೋಧ್ಯೆಯಲ್ಲಿ ಕೆಲಸ ಸಿಕ್ಕಿದೆ: ಕನ್ನಡಿಗ ಚೇತನ್