Oct 19, 2020, 4:28 PM IST
ಬೆಂಗಳೂರು (ಅ. 19): ಮಹಾರಾಷ್ಟ್ರದಿಂದ ಲಕ್ಷಾಂತರ ಕ್ಯೂಸೆಕ್ಸ್ ನೀರು ಬಿಡುತ್ತಿರುವ ಹಿನ್ನಲೆಯಲ್ಲಿ ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ಕಲಬುರ್ಗಿ ಜೇವರ್ಗಿಯ ಮಂದರವಾಡಿ ಗ್ರಾಮ ಸಂಪೂರ್ಣ ನಡುಗುಡ್ಡೆಯಾಗಿದೆ. ಈ ಗ್ರಾಮವನ್ನು ಸಂಪರ್ಕಿಸುವ ಏಕೈಕ ರಸ್ತೆ ಮುಳುಗಡೆಯಾಗಿದೆ. ಕೆಲವರು ಗಂಟು ಮೂಟೆ ಸಮೇತ ಸುರಕ್ಷಿತ ಸ್ಥಳಗಳಿಗೆ ಧಾವಿಸುತ್ತಿದ್ದಾರೆ. ಇವರ ಬದುಕು ನೀರುಪಾಲಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.