ಚೆನೈ ಬೆಂಗಳೂರು ಕೈಗಾರಿಕಾ ಕಾರಿಡಾರ್‌: ಕೃಷಿ ಭೂಮಿ ಸ್ವಾಧೀನಕ್ಕೆ ರೈತರ ವಿರೋಧ

Jul 23, 2022, 1:52 PM IST

ಚೆನೈ ಬೆಂಗಳೂರು-ಕೈಗಾರಿಕಾ ಕಾರಿಡಾರ್ ಗೆ ಕೃಷಿ ಜಮೀನು ವಶಪಡಿಸಿಕೊಳ್ಳಲು ಮುಂದಾಗಿರುವುದಕ್ಕೆ ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ . ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯೋಜನಾ ಪ್ರದೇಶ ಘೋಷಿಸಿ, ಕೈಗಾರಿಕೆಗಳಿಗೆ ಕೃಷಿ ಜಮೀನು ಪಡೆದುಕೊಳ್ಳುವ ಪ್ರಯತ್ನವನ್ನು  ಕೃಷಿಕರು ವಿರೋಧಿಸಿದ್ದಾರೆ. 

Dharwad:ಹಣ ಪಡೆದು ಮುಂಬಡ್ತಿ ನೀಡಿದ ಸಿಸಿಎಫ್ ವಿರುದ್ಧ ತಿರುಗಿ ಬಿದ್ದ ಅರಣ್ಯ ರಕ್ಷಕರು

ತುಮಕೂರು ತಾಲೂಕು ಕೋರಾ ಹೋಬಳಿಯ 74 ಗ್ರಾಮಗಳು, ಬೆಳ್ಳಾವಿ ಹೋಬಳಿಯ 35 ಗ್ರಾಮಗಳು, ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ 12 ಗ್ರಾಮಗಳು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಒಳಪಡುತ್ತದೆ. ಸುಮಾರು 80 ಸಾವಿರ ಜನರು ಈ ಹಳ್ಳಿಗಳ ವ್ಯಾಪ್ತಿಯಲ್ಲಿ ಬರುತ್ತಾರೆ. ಈ  ಯೋಜನೆಗೆ 35,622 ವಿಸ್ತೀರ್ಣದ ಫಲವತ್ತಾದ ಭೂಮಿಯನ್ನು ಬಳಸಿಕೊಳ್ಳಲು ಉದ್ದೇಶಿಸಿದ್ದು ಅಷ್ಟು ಪ್ರದೇಶವನ್ನು ಗುರುತಿಸಲಾಗಿದೆ. ಸ್ಥಳೀಯ ಯೋಜನಾ ಪ್ರದೇಶ ಘೋಷಣೆಗೂ ಮುನ್ನ ಆ ಭಾಗದ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ,  ಕೈಗಾರಿಕಾ ಕಾರಿಡಾರ್ ಪ್ರದೇಶ ಅಭಿವೃದ್ಧಿ ಚಟುವಟಿಕೆಗಳು ಹಾಗೂ ಯಾವುದೇ ಮಾಹಿತಿ ನೀಡದೇ ರೈತರನ್ನು ದೂರ ಇಡಲಾಗಿದೆ ಎಂದು  ರೈತ ಮುಖಂಡರು ಆರೋಪಿಸಿದ್ದಾರೆ.

ಸತತ 6 ಗಂಟೆ ಕಾರ್ಯಾಚರಣೆ ಬಳಿಕ ಗ್ರಾಮಕ್ಕೆ ವಿದ್ಯುತ್ ಮರು ಸಂಪರ್ಕ

ಶೇಕಡಾ 60 ರಷ್ಟು  ಜನರಿಗೆ ಉದ್ಯೋಗ ನೀಡಿರುವ  ಖುಷ್ಕಿ, ತರಿ, ತೋಟಗಾರಿಕೆ ಹೊಂದಿರುವ ಫಲವತ್ತಾದ  ಭೂಮಿಯೇ ಈ ಯೋಜನೆಗೆ ಏಕೆ ಬೇಕು , ಉಳುವ ರೈತರ ಭೂಮಿಯನ್ನು ಉಳ್ಳವರಿಗೆ ವರ್ಗಾಯಿಸುವ ಉದ್ದೇಶ ಇದೆಯೇ? ಮುಂದಿನ ದಿನಗಳಲ್ಲಿ ರೈತರನ್ನು ಕೃಷಿಯಿಂದ ಒಕ್ಕಲೆಬ್ಬಿಸುವ ಸಂಚು ಇದೆಯೇ? ಈ ಯೋಜನೆ ಜಾರಿಯಿಂದ ಕೃಷಿಯನ್ನು ಅವಲಂಭಿಸಿರುವ ರೈತರಿಗೆ ಲಾಭ ಏನು ಎಂದು ರೈತರು ಪ್ರಶ್ನಸಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಜಿ.ಎಸ್.ಬಸವರಾಜು ಇದರಿಂದ ರೈತರಿಗೆ ಯಾವುದೇ ರೀತಿಯ ತೊಂದರೆ ಆಗೋದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.