Mar 27, 2022, 10:13 AM IST
ಮೈ ರೋಮಾಂಚನಗೊಳಿಸುವ ದೈವ ಕೋಲ (Daiva Kola) ಅಪರೂಪದ ಆಚರಣೆಗೆ ಹರಿದು ಬಂದ ಜನಸಾಗರ, ಬೆಂಕಿಯ ಮೇಲೆ ದೈವದ ಆಟ! ಅಬ್ಬಬ್ಬಾ ಇಂತಹ ವಿಶಿಷ್ಟ ಆಚರಣೆಯನ್ನು ನೋಡಲು ಗಟ್ಟಿ ಗುಂಡಿಗೆ ಬೇಕು. ಇದು ಮಂಜಿನ ನಗರಿ ಮಡಿಕೇರಿಯ (Madikeri)ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ನಡೆದ ಕೋಲಗಳು.
ಇಲ್ಲಿ ಪ್ರತೀ ಮೂರು ವರ್ಷಕ್ಕೊಂದು ಬಾರಿ ಈ ಆಚರಣೆಯನ್ನು ನಡೆಸಲಾಗುತ್ತದೆ. ಆದರೆ ಪ್ರಕೃತಿ ವಿಕೋಪ ಹಾಗೂ ಕೋವಿಡ್ ನಿಂದಾಗಿ (Covid 19) ಹಲವು ವರ್ಷಗಳಿಂದ ಈ ಆಚರಣೆ ಕೇವಲ ಹರಕೆ ಒಪ್ಪಿಸುವುದಕ್ಕಷ್ಟೆ ಸೀಮಿತವಾಗಿತ್ತು. ಆದರೆ ಈ ಬಾರಿ ಹಿಂದಿನ ಕಾಲದಲ್ಲಿ ನಡೆಸುತ್ತಿದ್ದಂತೆ ಅದ್ದೂರಿಯಾಗಿ ದೈವ ಕೋಲಗಳನ್ನು ನಡೆಸಲಾಯಿತು. ರಾತ್ರಿಯಿಡಿ ನಡೆದ ಈ ಕೋಲಕ್ಕೆ ಸಾವಿರಾರರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದು ವಿಶೇಷ. ಇಲ್ಲಿ ಪ್ರಮುಖವಾಗಿ ವಿಷ್ಣುಮೂರ್ತಿ ಕೋಲ, ಫಾಷಣಮೂರ್ತಿ, ರಕ್ತೇಶ್ವರಿ, ಗುಳಿಗನ ಕೋಲ, ಅಪ್ಪಚ್ಚೀರ ಮಂದಣ್ಣ ಸೇರಿದಂತೆ ಹಲವು ಬಗೆಯ ಕೋಲಗಳು ನಡೆದವು. ತೆರೆ ಕಟ್ಟಿದವರ ವೇಷಭೂಷಣಗಳು, ನೃತ್ಯಗಳು ನೋಡುಗರ ಮೈ ರೋಮಾಂಚನಗೊಳಸಿವಂತಿತ್ತು.ಇನ್ನೂ ವಿಷ್ಣುಮೂರ್ತಿಯು ಬೆಂಕಿಗೆ ಬೀಳುವ ದೃಶ್ಯವನ್ನು ನೋಡವುದಕ್ಕಾಗಿಯೇ ಅತೀ ಹೆಚ್ಚು ಭಕ್ತಾದಿಗಳು ಕಾದುಕುಳಿತ್ತಿದ್ದರು.
News Hour: ತಪ್ಪಿಸಿಕೊಂಡ್ರೆ ಮತ್ತೆ ಪರೀಕ್ಷೆ ಇಲ್ಲ...ಸಲಾಂ ಮಂಗಳಾರತಿ ಬೇಡ!
ಇನ್ನೂ ಈ ದೈವದ ಕೋಲ ಆಚರಣೆ ಮಾಡಲು ಅದರದ್ದೇ ಆದ ಇತಿಹಾಸ (History)ಕೂಡ ಇದೆ. ಇದು ರಾಜರ ಕಾಲದಿಂದಲೇ ನಡೆದುಕೊಂಡು ಬಂದಿರುವಂತಹ ಆಚರಣೆ. ರಾಜರ ಕಾಲದಲ್ಲಿ ಭೀಕರ ಕಾಯಿಲೆಗಳು ಕಾಣಿಸಿಕೊಂಡಿದ್ದ ಸಂದರ್ಭ ಇಲ್ಲಿಯ ರಾಜರು ಕೇರಳ ರಾಜರಾದ ಮಲಯ ಹಾಗೂ ತಂಬರ ರಾಜರ ಮೋರೆ ಹೋಗಿದ್ದರು. ಈ ಸಂದರ್ಭ ಅಲ್ಲಿಯ ಮಲಯರು ಕೊಡಗು ಜಿಲ್ಲೆಗೆ ವೈದ್ಯರೊಂದಿಗೆ ಆಗಮಿಸಿದ್ದರು. ಆ ಸಂದರ್ಭ ಅಲ್ಲಿಯ ದೇವರುಗಳನ್ನು ಜಿಲ್ಲೆಗೆ ಕರೆತಂದು ಇಲ್ಲಿಯೇ ನೆಲೆನಿಂತರು ಎಂಬದು ಇತಿಹಾಸ. ಆದ್ದರಿಂದ ಇಂದಿಗೂ ಮಲಯ ಜನಾಂಗದವರು ಆಗಮಿಸಿ ಈ ತೆರೆಯನ್ನು ಕಟ್ಟುತ್ತಾರೆ. ರಾಜರ ಕಾಲದಲ್ಲಿ ಆರಂಭವಾದ ಈ ಆಚರಣೆ ಇಂದಿಗೂ ನಡೆದುಕೊಂಡು ಬರುತ್ತಿದೆ .
ಒಟ್ಟಿನಲ್ಲಿ ಕೋವಿಡ್ ಆರ್ಭಟ ಕಡಿಮೆಯಾಗಿರುವದರಿಂದ ಕೊಡಗು ಜಿಲ್ಲೆಯಲ್ಲಿ ಹಬ್ಬಹರಿದಿನಗಳು ಎಂದಿನಂತೆ ವಿಜೃಂಭಣೆಯಿಂದ ನಡೆಯುತ್ತಿದೆ. ಭಕ್ತಾಧಿಗಳು ಕೂಡ ಅತೀ ಉತ್ಸಾಹದಿಂದ ದೇವಾಲಯದತ್ತ ಹೆಜ್ಜೆಯಿಡುತ್ತಿದ್ದಾರೆ.