May 27, 2020, 1:59 PM IST
ಚಿಕ್ಕಬಳ್ಳಾಪುರ(ಮೇ.27): ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಆಂಧ್ರ ಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಕದ್ದ ಘಟನೆ ದೇವನಹಳ್ಳಿ ಬಳಿ ಇಂದು(ಬುಧವಾರ) ನಡೆದಿದೆ. ದೇವನಹಳ್ಳಿ ಸಮೀಪ ಡಾಬಾದಲ್ಲಿ ಊಟಕ್ಕೆಂದು ಬಸ್ ನಿಲ್ಲಿಸಲಾಗಿತ್ತು. ಈ ವೇಳೆ ಕರ್ನಾಟಕ ಮೂಲದ ಆರೋಪಿ ಬಸ್ ಚಲಾಯಿಸಿಕೊಂಡು ಹೋಗಿದ್ದಾನೆ.
ಆನ್‌ಲೈನ್ ಶಿಕ್ಷಣದಿಂದಿರುವ ಅಪಾಯಗಳೇನು?
ಆರೋಪಿ ಎಣ್ಣೆ ನಶೆಯಲ್ಲಿ ಸುಮಾರು ಮೂವತ್ತು ಕಿಲೋಮೀಟರ್ ದೂರದ ವರೆಗೆ ಬಸ್ ಚಲಾಯಿಸಿಕೊಂಡು ಹೋಗಿದ್ದ. ಅಧಿಕಾರಿಗಳು ಜಿಪಿಎಸ್ ಸಹಾಯದಿಂದ ಬಸ್ ಪತ್ತೆ ಹಚ್ಚಿದ್ದಾರೆ. ಬಸ್ ಕದ್ದಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ. ಈತನ ವರ್ತನೆಯಿಂದ ಬಸ್‌ನಲ್ಲಿ ಪ್ರಯಾಣಿಕರು ಕೆಲ ಕ್ಷಣ ತಬ್ಬಿಬ್ಬಾಗಿದ್ದರು.