Nov 27, 2022, 4:52 PM IST
ಯಾದಗಿರಿ: ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ಮುಂದುವರೆದಿದ್ದು, ನಗರದಲ್ಲಿ ಆಸ್ಪತ್ರೆಯ ಒಳಾಂಗಣದಲ್ಲೇ ಮಧ್ಯರಾತ್ರಿ 12 ಗಂಟೆಗೆ ಮಹಿಳೆಯ ಹೆರಿಗೆ ಆಗಿದೆ. ಹೆರಿಗೆ ವೇಳೆ ಗಂಡ ಬಟ್ಟೆಯಿಂದ ಮರೆಮಾಚಿದ್ದು, ಕೂಸು ಹೊರಬಂದಿದೆ ಎಂದು ಗೋಳಾಡಿ ಕರೆದ್ರೂ ಆಸ್ಪತ್ರೆ ಸಿಬ್ಬಂದಿ ಬಂದಿಲ್ಲ. ಈ ಕುರಿತು ನಗರಸಭೆ ಅಧ್ಯಕ್ಷ ಜಿಲ್ಲಾ ಸರ್ಜನ್ ಗಮನಕ್ಕೆ ತಂದ್ರೂ ಟ್ರಿಟ್ಮೆಂಟ್ ಸಿಕ್ಕಿಲ್ಲ.