ಸಿಬ್ಬಂದಿ ಕಣ್ತಪ್ಪಿನಿಂದ ಲಡ್ಡು ಪ್ರಸಾದದ ಜತೆ ಭಕ್ತನಿಗೆ ಸಿಕ್ತು ₹2.19 ಲಕ್ಷ: ಸಿಸಿಟಿವಿ ದೃಶ್ಯ ವೈರಲ್‌

Jul 29, 2022, 8:04 PM IST

ಚಾಮರಾಜನಗರ (ಜು. 29): ಸಿಬ್ಬಂದಿ ಕಣ್ತಪ್ಪಿನಿಂದ ಪ್ರಸಾದದ ಜೊತೆಗೆ 2 ಲಕ್ಷ ರೂಪಾಯಿ ಭಕ್ತನ ಪಾಲಾದ ಘಟನೆ  ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದಲ್ಲಿ ನಡೆದಿದೆ.  ವಿಶೇಷ ದರ್ಶನಕ್ಕೆ ಟಿಕೇಟ್ ನೀಡಲು ಕುಳಿತಿದ್ದ ಸಿಬ್ಬಂದಿ ಭಕ್ತನಿಗೆ ಲಾಡು ಜೊತೆಗೆ ಹಣದ ಚೀಲ ನೀಡಿದ್ದಾರೆ. ಲಾಡು ಪ್ರಸಾದ ಇಟ್ಟಿದ್ದ ಬ್ಯಾಗ್ ಸಮೀಪ ಹಣವನ್ನು ಸಹ ಇಡಲಾಗಿದ್ದ ಹಿನ್ನಲೆ ಹಣ ಸಹಿತ ಬ್ಯಾಗನ್ನು ಭಕ್ತನೊರ್ವನಿಗೆ ಸಿಬ್ಬಂದಿ ನೀಡಿದ್ದಾರೆ. ಜನದಟ್ಟಣೆ ಹೆಚ್ಚಾಗಿ ಗಾಬರಿಯಲ್ಲಿ ಸಿಬ್ಬಂದಿ ಯಾಮಾರಿದ್ದಾರೆ.  ವಿಚಾರ ತಿಳಿದು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಲಾಗಿದೆ. ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಕೋಟಿ ಒಡತಿಯಾದ ಚಾಮುಂಡಿ ತಾಯಿ: ಒಂದೇ ತಿಂಗಳಲ್ಲಿ ಬರೋಬ್ಬರಿ ಕಾಣಿಕೆ